ಬೆಂಗಳೂರು: ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ಇಡೀ ಸ್ಯಾಂಡಲ್ವುಡ್ನ ನಟ-ನಟಿಯರು ಕೈ ಜೋಡಿಸಿದ್ದಾರೆ. ಇನ್ನೂ ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡ ಇದಕ್ಕೆ ಸಾಥ್ ನೀಡಿದ್ದಾರೆ.
ಕನ್ನಡಿಗರ ಜೀವನದಿ ಕಾವೇರಿಯನ್ನು ಕಾಪಾಡಿ... ರಾಕಿ ಭಾಯ್ ಮನವಿ - kaveri koogu campaign
ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿದ್ದು, ಕಾವೇರಿ ತಾಯಿಯನ್ನು ಕಾಪಾಡಲು ಕನ್ನಡಿಗರಲ್ಲರೂ ಬೆಂಬಲ ನೀಡುವಂತೆ ರಾಕಿ ಭಾಯ್ ಮನವಿ ಮಾಡಿದ್ದಾರೆ.
ನಾವು ಕನ್ನಡಿಗರು, ಹೆಣ್ಣಿಗೆ ಗೌರವ ಕೊಡುವುದರಲ್ಲಿ ಮುಂದೆ ಇರುವವರು. ನಮ್ಮ ಮನೆಯಲ್ಲಿ ಅಕ್ಕ, ತಂಗಿ, ತಾಯಿ ಯಾರಿಗೆ ಸಣ್ಣ ನೋವಾದ್ರು ನಾವು ಸಹಿಸಲ್ಲ. ಅದು ಏನೇ ಜವಾಬ್ದಾರಿ ಆದ್ರು ನಾವು ವಹಿಸಿಕೊಂಡು ಸಮಸ್ಯೆಯನ್ನು ಬಗೆಹರಿಸ್ತೀವಿ. ಅಂತಹದರಲ್ಲಿ ಶತಮಾನದಿಂದಲೂ ಕೋಟ್ಯಾಂತರ ಜನರನ್ನ ಕಾವೇರಿ ತಾಯಿ ರಕ್ಷಿಸುತ್ತಾ ಬಂದಿದ್ದಾಳೆ. ಆದರೆ ಈಗ ನಮ್ಮ ಕಾವೇರಿ ತಾಯಿ ಬತ್ತಿ ಹೋಗುತ್ತಿದ್ದಾಳೆ. ಕಾವೇರಿ ನದಿಯನ್ನು ಕಾಪಾಡುವ ಆದ್ಯ ಕರ್ತವ್ಯ ನಮ್ಮದಾಗಿದೆ. ಕಾವೇರಿ ತಾಯಿಯನ್ನು ಕಾಪಾಡಿ ಎಂದು ಕನ್ನಡಿಗರಲ್ಲಿ ರಾಕಿ ಭಾಯ್ ಮನವಿ ಮಾಡಿದ್ದಾರೆ.
ಇನ್ನು ಇದಕ್ಕಾಗಿಯೇ ಈಶಾ ಫೌಂಡೇಶನ್ ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನಾನು ಸಹ ಕಾವೇರಿ ತಾಯಿಯನ್ನು ಉಳಿಸಿಕೊಳ್ಳಲು ಇವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ನೀವು ಸಹ ದಯ ಮಾಡಿ ತಾಯಿಯನ್ನು ಕಾಪಾಡಲು ಬೆಂಬಲ ನೀಡಬೇಕು. ಅದಕ್ಕಾಗಿ ನೀವು ಒಂದು ಗಿಡವನ್ನು ಕೊಂಡರೆ ಸಾಕು, ಒಂದು ಗಿಡವನ್ನು ಕೊಳ್ಳುವ ಶಕ್ತಿ ಎಲ್ಲರಲ್ಲೂ ಇದೆ ಎಂದು ಭಾವಿಸ್ತೀನಿ. http://kannada.cauverycalling.orgವೆಬ್ ಸೈಟ್ಗೆ ಭೇಟಿ ನೀಡಿ ಅಥವಾ ಮೊಬೈಲ್ ಸಂಖ್ಯೆ 80009 80009 ಕರೆ ಮಾಡಿ ಪ್ರತಿ ಗಿಡಕ್ಕೆ 42 ರೂ.ನಂತೆ ಪಾವತಿಸಿ ಕಾವೇರಿ ಕೂಗು ಅಭಿಯಾನಕ್ಕೆ ಬೆಂಬಲಿಸಿಬಹುದು ಎಂದು ವಿಡಿಯೋ ಮೂಲಕ ರಾಕಿ ಭಾಯ್ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.