ಮುಂಬೈ (ಮಹಾರಾಷ್ಟ್ರ):ಹಿಂದಿ ಬಿಗ್ಬಾಸ್ ಸೀಸನ್ 15 ರಲ್ಲಿ ಭಾಗವಹಿಸಿರುವ ನಟಿ ರಾಖಿ ಸಾವಂತ್ಗೆ ಪ್ರತಿಸ್ಪರ್ಧಿ ಅಭಿಜಿತ್ ಟೀಕಿಸಿದ್ದಾರೆ. ರಿತೇಶ್ ನಿನ್ನ ಬಾಡಿಗೆ ಗಂಡ ಎಂದು ಅಭಿಜಿತ್ ಟೀಕಿಸಿರುವುದನ್ನು ಬಿಗ್ಬಾಸ್ ರಿಲೀಸ್ ಮಡಿರುವ ಹೊಸ ಪ್ರೋಮೋದಲ್ಲಿದೆ.
ಪ್ರೋಮೋದಲ್ಲಿ, ಪತಿ ರಿತೇಶ್ ನಿನ್ನ ಬಾಡಿಗೆ ಗಂಡ ಎಂದು ಅಭಿಜಿತ್ ಹೇಳಿದ್ದರೆ ಅದಕ್ಕೆ ಆಕ್ರೋಶಗೊಂಡ ರಾಖಿ ಸಾವಂತ್ ನಾನು ಸಪ್ತಪದಿ ತುಳಿದು ರಿತೇಶ್ರನ್ನು ವಿವಾಹವಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಭಿಜಿತ್ ನಿನ್ನ ಮನಸ್ಸಿನಲ್ಲಿ ಈ ರೀತಿಯ ವಿಚಾರಗಳಿವೆ, ಹಾಗಾಗಿಯೇ ನೀನು ಈ ರೀತಿಯ ಹೇಳಿಕೆ ನೀಡುತ್ತಿರುವುದಾಗಿ ಪತಿ ರಿತೇಶ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಸಲ್ಮಾನ್ ಖಾನ್ ಕೂಡ ಈ ರೀತಿಯೇ ಹೇಳಿಕೆ ನೀಡಿದ್ದಾರೆಂದು ಸ್ಫರ್ಧಿ ಅಭಿಜಿತ್ ವಾದಿಸಿದ್ದು, ಖಂಡಿತವಾಗಿಯೂ ಸಲ್ಮಾನ್ ಸರ್ ಹೀಗೆ ಹೇಳಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.