ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ರಕ್ಷಾಬಂಧನ ಸಂಭ್ರಮ: ಸ್ಟಾರ್​ ಕುಟುಂಬದಲ್ಲಿ ಹೀಗಿತ್ತು ಹಬ್ಬದಾಚರಣೆ - Challenging star Darshan

ಸ್ಯಾಂಡಲ್​ವುಡ್​ನಲ್ಲಿ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಹೋದರತ್ವ ಬೆಸೆಯುವ ಈ ಹಬ್ಬವನ್ನು ಸ್ಟಾರ್​ ನಟರು ಮಾತ್ರವಲ್ಲದೆ ಅವರ ಮಕ್ಕಳು ಸಹ ಆಚರಣೆ ಮಾಡಿದ್ದಾರೆ.

rakhi-festival
ಸ್ಟಾರ್​ ಕುಟುಂಬದಲ್ಲಿ ಹಬ್ಬ ಆಚರಣೆ

By

Published : Aug 23, 2021, 12:46 PM IST

ಕಳೆದ ದಿನ ದೇಶಾದ್ಯಂತ ಅಣ್ಣ ತಂಗಿಯರ ಸಂಬಂಧ ಬೆಸೆಯುವ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಈ ಸಡಗರ ಸಂಭ್ರಮ, ಸ್ಯಾಂಡಲ್​ವುಡ್​ನಲ್ಲಿಯೂ ಕಳೆಗಟ್ಟಿತ್ತು. ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಚಾಲೆಂಜಿಂಗ್​ ಸ್ಟಾರ್​ ದರ್ಶನ್, ರಕ್ಷಿತಾ ಪ್ರೇಮ್ ಮನೆಯಲ್ಲಿ ರಕ್ಷಾ ಬಂಧನ ಜೋರಾಗಿತ್ತು.

ಸಹೋದರ ಗೌರಂಗ್​ಗೆ ರಾಖಿ ಕಟ್ಟಿದ ರಾಧಿಕಾ ಪಂಡಿತ್​

ಯಶ್ ಮನೆಯಲ್ಲಿ ಈ ವರ್ಷದ ರಾಖಿ ಹಬ್ಬ ಬಹಳ ಸ್ಪೆಷಲ್‌ ಆಗಿತ್ತು. ಯಶ್ ನೂತನ ಮನೆಯಲ್ಲಿ ಮಗಳು ಐರಾ, ಸಹೋದರ ಯಥರ್ವ್​ನಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮಿಸಿದ್ದಾಳೆ. ಅಷ್ಟೇ ಅಲ್ಲದೆ, ಮಕ್ಕಳ ಜೊತೆಗೆ ಯಶ್ ತನ್ನ ಸಹೋದರಿ ನಂದಿನಿಯಿಂದಲೂ ರಾಖಿ ಕಟ್ಟಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಕೂಡ ತನ್ನ ಸಹೋದರ ಗೌರಂಗ್​ಗೆ ರಾಖಿ ಕಟ್ಟೋದನ್ನ ಮರೆತಿಲ್ಲ. ಈ ಸುಂದರ ಕ್ಷಣಗಳನ್ನ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಕಿಂಗ್​ ಫ್ಯಾಮಿಲಿಯಲ್ಲಿ ರಕ್ಷಾಬಂಧನ

ಗೋಲ್ಡನ್ ಸ್ಟಾರ್ ಗಣೇಶ್​ ಮನೆಯಲ್ಲಿಯೂ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗಣೇಶ್ ಮತ್ತು ಶಿಲ್ಪಾ ಮಗಳಾದ ಚಾರಿತ್ರ್ಯಾ ಸಹೋದರ ವಿಹಾನ್​ಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಮಾಡಿದ್ದಾಳೆ. ಈ ಅಕ್ಕರೆಯ ಬಾಂಧವ್ಯದ ಕ್ಷಣಗಳನ್ನ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗೋಲ್ಡನ್​ ಸ್ಟಾರ್​ ಮಕ್ಕಳ ರಕ್ಷಾ ಬಂಧನ ಆಚರಣೆ

ಸ್ಯಾಂಡಲ್​ವುಡ್​ನ ಸುಂಟರಗಾಳಿ ನಟಿ ಅಂತಾ ಖ್ಯಾತಿ ಪಡೆರುವ ರಕ್ಷಿತಾ ಪ್ರೇಮ್ ಮನೆಯಲ್ಲಿ ಸಹ ರಾಖಿ ಸಡಗರ ಜಾಸ್ತಿನೇ ಇತ್ತು. ರಕ್ಷಿತಾ ಪ್ರೇಮ್ ಸಹೋದರ ರಾಣ ಅಲ್ಲದೇ, ತಮ್ಮಂದಿರು ಎಂದು ಮುದ್ದಾಗಿ ಕರೆಯುವ ಕಾಮಿಡಿ ಕಿಲಾಡಿ ಸೂರಜ್, ಸೂರಿ ಸೇರಿದಂತೆ ಎಲ್ಲರಿಗೂ ರಾಖಿ ಕಟ್ಟುವ ಮೂಲಕ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಸಹೋದರರ ಜೊತೆ ರಕ್ಷಿತಾ ಪ್ರೇಮ್​

ಇದರ ಜೊತೆಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಮನೆಯಲ್ಲೂ ರಾಖಿ ಹಬ್ಬದ ಸಡಗರ ಮನೆ ಮಾಡಿತ್ತು. ದರ್ಶನ್ ಕುಟುಂಬದಲ್ಲಿ ಆತ್ಮೀಯರಾಗಿರುವ ಬೆಂಗಳೂರಿನ ಕವಿತಾ ಎಂಬುವರು, ಪ್ರತಿ ವರ್ಷ ದರ್ಶನ್​ಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಅದೇ ರೀತಿ ಕವಿತಾ ಈ ವರ್ಷವೂ ಕೂಡ ಅಣ್ಣನ‌ ಸ್ಥಾನದಲ್ಲಿರುವ ದರ್ಶನ್​ಗೆ ರಾಖಿ ಕಟ್ಟಿದ್ದಾರೆ.

ದರ್ಶನ್​ಗೆ ರಾಖಿ ಕಟ್ಟುತ್ತಿರುವ ಕವಿತಾ

ABOUT THE AUTHOR

...view details