ಬಿಗ್ ಬಾಸ್ ಮನೆಯಿಂದ ರಾಜು ತಾಳಿಕೋಟೆ ಹೊರ ನಡೆದಿದ್ದಾರೆ.ಒಂಭತ್ತು ವಾರಗಳಿಂದ ಇತರ ಸ್ಪರ್ಧಿಗಳ ಜೊತೆ ಕಷ್ಟಪಟ್ಟು ಆಡಿದ ಆಟ ನಿನ್ನೆಗೆ ಅಂತ್ಯವಾಗಿದೆ.
ಇವರ ಬೀಳ್ಕೊಡುಗೆ ದೊಡ್ಡಮನೆಯಲ್ಲಿ ದುಃಖದ ವಾತಾವರಣವನ್ನೇ ನಿರ್ಮಾಣ ಮಾಡಿತ್ತು. ಮನೆ ಮಂದಿಯೆಲ್ಲ ಕಣ್ಣೀರು ಹಾಕುತ್ತ ಹಿರಿಯರಾದ ರಾಜು ತಾಳಿಕೋಟೆಯನ್ನು ಬೀಳ್ಕೊಟ್ಟರು. ಮನೆಯಿಂದ ಹೊರ ನಡೆಯುವ ಮುನ್ನ ಕುರಿ ಪ್ರತಾಪ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ರು. ಈ ವೇಳೆ ಕುರಿ ಪ್ರತಾಪ್ ಅತ್ತದ್ದೂ ಉಂಟು. ಇದಕ್ಕೆ ಕಾರಣ ಬಿಗ್ ಬಾಸ್ ಮನೆಯಲ್ಲಿ ರಾಜು ತಾಳಿ ಕೋಟೆಗೆ ತುಂಬಾ ಹತ್ತಿರವಾಗಿದ್ದವರಲ್ಲಿ ಕುರಿ ಪ್ರತಾಪ್ ಕೂಡ ಒಬ್ರು.