ಕುತೂಹಲದ ಗೂಡಾಗಿರುವ ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ನಗು, ಸಂತೋಷ ತುಂಬಿ ತುಳುಕುತ್ತಿತ್ತು. ಆದ್ರೆ ದೊಡ್ಡ ಮನೆಯಲ್ಲೀಗ ಕಣ್ಣೀರು, ಗುಸು ಗುಸು ಮಾತುಗಳು ಶುರುವಾಗಿವೆ.
ಐದನೇ ದಿನ ಬಿಗ್ ಬಾಸ್ ಮನೆ ಸ್ವಲ್ಪ ವಿಭಿನ್ನವಾಗಿತ್ತು. ಮನೆಯ ಎಲ್ಲಾ ಸದಸ್ಯರು ಇಂದೇ ಕಡೆ ಕುಳಿತು ಮಾತುಕತೆಯಲ್ಲಿ ತೊಡಗಿ ಕೊಂಚ ಹರಟೆಯಲ್ಲಿ ಜಾರಿದ್ರು. ಈ ನಡುವೆ ರವಿ ಬೆಳಗೆರೆ ಮತ್ತು ರಾಜು ತಾಳಿ ಕೋಟೆ ಸಂಭಾಷಣೆ ಮಜಬೂತಾಗಿತ್ತು.
ಕಮಲ ಹ್ಯಾಡ್ ರಿಲೇಷನ್ಶಿಪ್ ಸಂಬಡಿ ಎಲ್ಸ್ ಎಂದು ಯಾವುದೋ ವಿಚಾರ ಮಾತನಾಡುವಾಗ ಮಧ್ಯಪ್ರವೇಶಿಸಿದ ತಾಳಿಕೋಟೆ, ನಿಮಗೆ ಮಧ್ಯೆ ಮಧ್ಯೆ ಇಂಗ್ಲಿಷ್ ಸೇರಿಸಿದ್ರೆ ನಮಗೆ ತಿಳಿಯಂಗಿಲ್ಲ. ಈ ರೀತಿ ಇಂಗ್ಲಿಷ್ ಮಾತಾದಿದ್ರೆ ನಮ್ಗ ಅರ್ಥ ಆಗಂಗಿಲ್ಲ ಎಂದ್ರು.
ಇದಕ್ಕೆ ತಮಾಷೆ ಮಾಡಿದ ರವಿ ಬೆಳಗೆರೆ, ರಾಜು ತಾಳಿಕೋಟೆ ಈಸ್ ಆ್ಯನ್ ಈಡಿಯಟ್. ಅಂದ್ರೆ ರಾಜು ತಾಳಿಕೋಟೆ ಬಹಳ ಬುದ್ಧಿವಂತ ಅಂದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜು, ನನಗೆ ಈಡಿಯಟ್ ಅಂದ್ರೆ ತಿಳಿಯುತ್ತೆ ಮತೆ ಅಂತಾ ನಕ್ಕರು.