ಹಿಂದಿಯ 'ಬರೇಲಿ ಕಿ ಬರ್ಫಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ರಾಜಕುಮಾರ್ ರಾವ್ ಮತ್ತು ಕೃತಿ ಸನೂನ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸಿದ್ದವಾಗುತ್ತಿದೆ. ಈ ಚಿತ್ರಕ್ಕೆ ಅಭಿಷೇಕ್ ಜೈನ್ ಆ್ಯಕ್ಷನ್ ಕಟ್ ಹೇಳಿದ್ದು, ಮಹವೀರ್ ಜೈನ್ ಮತ್ತು ದಿನೇಶ್ ವಿಜನ್ ಬಂಡವಾಳ ಹಾಕುತ್ತಿದ್ದಾರೆ.
ಈಗಾಗಲೇ ರಾಜ್ ಮತ್ತು ಕೃತಿ ಬರೇಲಿ ಕಿ ಬರ್ಫಿ ಕಾಮಿಡಿ ಸಿನಿಮಾ ಮೂಲಕ ಅಭಿಮಾನಿಗಳನ್ನು ನಗಿಸಿದ್ರು. ಇದೀಗ ಅಂತಹದ್ದೇ ಮತ್ತೊಂದು ಕಾಮಿಡಿ ಡ್ರಾಮದ ಮೂಲಕ ತೆರೆ ಮೇಲೆ ಕಾಣಲು ಸಿದ್ದರಾಗುತ್ತಿದ್ದಾರೆ.
ಹೆಸರಿಡದ ಈ ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ಹೊರ ಬಂದಿಲ್ಲ. ಆದ್ರೆ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಈ ಸಿನಿಮಾಕ್ಕೆ ಅಭಿಷೇಕ್ ಜೈನ್ ಆ್ಯಕ್ಷನ್ ಕಟ್ ಹೇಳುತ್ತಿರುವ ವಿಚಾರ ಗೊತ್ತಾಗಿದೆ. ಅಭಿಷೇಕ್ ಜೈನ್ ಈ ಹಿಂದೆ ಗುಜರಾತಿ ಭಾಷೆಯಲ್ಲಿ ಬೇ ಯಾರ್ ಮತ್ತು ಕೆವಿ ರೈಟ್ ಜೈಶ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ಪರೇಶ್ ರಾವಲ್, ರತ್ನ ಪಾಠಕ್ ಷಾ ಮತ್ತು ಅಪರ್ಶಕ್ತಿ ಖುರಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರದ ಕೆಲಸ ಪ್ರಾರಂಭಿಸುವ ಮೊದಲು ದಿನೇಶ್ ಮತ್ತು ಮಹಾವೀರ್ ಅವರು ಮಾ ವೈಷ್ಣ ದೇವಿಯ ಆಶೀರ್ವಾದ ಪಡೆಯಲು ವೈಷ್ಣೋ ದೇವಿಗೆ ತೆರಳಿದ್ದರು.