ಮುಂಬೈ: ಸಿನಿಮಾ ಕ್ಷೇತ್ರ ಬದಲಾಗುತ್ತಿದೆ. ಕಲಾವಿದರು ಆಸೆಯಿಟ್ಟುಕೊಂಡು ಮುಂಬೈಗೆ ಬರುವ ಮುನ್ನ ತಯಾರಿ ನಡೆಸಿರಬೇಕು ಎಂದು ನಟ ರಾಜ್‌ಕುಮ್ಮರ್ ರಾವ್ ಹೇಳಿದ್ದಾರೆ.
ಸೌದ್ ರಾವ್, ಸತ್ಯಂ ಶ್ರೀವಾಸ್ತವ ಮತ್ತು ರಾಜೀವ್ ಗರ್ಗ್ ಬರೆದಿರುವ ನೀಲಕಂಠ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ಅವರು, ನನ್ನಲ್ಲಿರುವ ಏಕೈಕ ಪ್ರತಿಭೆ ಎಂದರೆ ನಾನು ಚಿಕ್ಕಂದಿನಿಂದಲೂ ಕಲೆ ಪ್ರೀತಿಸುತ್ತಿದ್ದೆ.
ನಾನೆಂದಿಗೂ ಖ್ಯಾತಿ ಹಾಗೂ ಹಣದ ಬೆನ್ನತ್ತಿಲ್ಲ. ಮೊದಲು ದೆಹಲಿಯಲ್ಲಿ ನಾಟಕ ಶಾಲೆಗೆ ಸೇರಿ ನಟಿಸಲು ಕಲಿತೆ. ಬಳಿಕ ಪುಣೆಯ ಚಲನಚಿತ್ರ ಸಂಸ್ಥೆಗೆ ಸೇರಿದೆ. ಯಾಕೆಂದರೆ, ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಎಲ್ಲ ಕಲಿಯಬೇಕು ಎಂದರು.
ಯಾವುದೇ ಪೂರ್ವಾಭ್ಯಾಸವಿಲ್ಲದೆ ಮುಂಬೈಗೆ ಬರಬೇಡಿ. ಇಲ್ಲಿ ಪ್ರತಿಭೆಗೆ ಮಾತ್ರ ಅವಕಾಶ. ಮೊದಲು ತರಬೇತಿ ಪಡೆಯಿರಿ, ಸಾಧ್ಯವಾದ್ರೆ ನೀವೇ ಬೇರೆಯವರಿಗೆ ನಟನೆ ಬಗ್ಗೆ ತರಬೇತಿ ಕೊಡಲು ಪ್ರಾರಂಭಿಸಿ. ಬಳಿಕ ಮುಂಬೈಗೆ ಬನ್ನಿ ಆಗ, ನಿಮಗೆ ಇಲ್ಲಿ ನೂರಾರು ಅವಕಾಶಗಳು ಸಿಗುತ್ತವೆ ಎಂದು ನಟನೆಯಲ್ಲಿ ಆಸಕ್ತಿಯುಳ್ಳವರಿಗೆ ಸಲಹೆ ನೀಡಿದರು.
ಸದ್ಯ ರಾವ್, ಹಮ್ ದೋ ಹಮಾರೆ ದೋ, ರೂಹಿ ಅಫ್ಜಾನಾ, ಬಾದೈ ದೋ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.