ಕರ್ನಾಟಕ

karnataka

ETV Bharat / sitara

ಮನೆಗೆ ಮರಳಿದ ರಜಿನಿಕಾಂತ್​ರನ್ನು ಆರತಿ ಮಾಡಿ ಬರಮಾಡಿಕೊಂಡ ಪತ್ನಿ - ತಮಿಳಿನ 'ಅಣ್ಣಾತೆ' ಸಿನಿಮಾ

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಚೆನ್ನೈನ ತಮ್ಮ ನಿವಾಸಕ್ಕೆ ಬಂದ ಸೂಪರ್​ಸ್ಟಾರ್​ ರಜಿನಿಕಾಂತ್​ರನ್ನು ಅವರ ಪತ್ನಿ ಲತಾ ರಜಿನಿಕಾಂತ್ ಆರತಿ ಮಾಡಿ ಬರಮಾಡಿಕೊಂಡಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Rajinikanth's wife welcomes him home with aarti
ಆರತಿ ಬೆಳಗಿ ಸ್ವಾಗತ ಕೋರಿದ ರಜಿನಿಕಾಂತ್ ಪತ್ನಿ

By

Published : Dec 28, 2020, 12:02 PM IST

ಚೆನ್ನೈ (ತಮಿಳುನಾಡು):ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ತಮಿಳುನಾಡಿನ ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಬಂದ ಸೂಪರ್​ಸ್ಟಾರ್​ ರಜಿನಿಕಾಂತ್​ರನ್ನು ಅವರ ಪತ್ನಿ ಆರತಿ ಮಾಡಿ ಬರಮಾಡಿಕೊಂಡಿದ್ದಾರೆ.

ಕಬಾಲಿ ನಟ ರಜಿನಿಕಾಂತ್ ಕಳೆದ ಕೆಲ ದಿನಗಳಿಂದ ಹೈದರಾಬಾದ್​ನಲ್ಲಿ ತಮಿಳಿನ 'ಅಣ್ಣಾತೆ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರತಂಡದ ಕೆಲ ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆ ಶೂಟಿಂಗ್​ ನಿಲ್ಲಿಸಲಾಗಿತ್ತು. ರಜಿನಿಕಾಂತ್​ರ ವರದಿ ನಗೆಟಿವ್​ ಬಂದಿತ್ತಾದರೂ, ಐಸೋಲೇಷನ್​ನಲ್ಲಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ರಕ್ತದೊತ್ತಡದಲ್ಲಿ ಏರುಪೇರಾಗಿ ಡಿ.25 ರಂದು ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರತಿ ಬೆಳಗಿ ಸ್ವಾಗತ ಕೋರಿದ ರಜಿನಿಕಾಂತ್ ಪತ್ನಿ

ಇದನ್ನೂ ಓದಿ: ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾದ ಸೂಪರ್​ ಸ್ಟಾರ್ ರಜಿನಿಕಾಂತ್​

ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಭಾನುವಾರ ರಜಿನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಪುತ್ರಿ ಐಶ್ವರ್ಯಾ ಧನುಷ್​ ಜೊತೆ ಅವರು ವಿಮಾನದಲ್ಲಿ ಚೆನ್ನೈಗೆ ತೆರಳಿದ್ದಾರೆ. ಮನೆಗೆ ಆಗಮಿಸಿದ ಪತಿಯನ್ನು ಲತಾ ರಜಿನಿಕಾಂತ್​ ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

...view details