ಕರ್ನಾಟಕ

karnataka

ETV Bharat / sitara

ಇದೇ ಮೊದಲ ಬಾರಿಗೆ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ 'ಅಣ್ಣಾಥೆ' - Annaatthe Release 1193 Screen

ದೀಪಾವಳಿ ಉಡುಗೊರೆಯಾಗಿ ನ. 4ರಂದು ಬಹುನಿರೀಕ್ಷಿತ ಚಿತ್ರ 'ಅಣ್ಣಾಥೆ' ಬಿಡುಗಡೆಯಾಗಲಿದೆ. ಕೊರೊನಾ ಹಾಗೂ ದರ್ಬಾರ್ ನಂತರ ರಜನಿಕಾಂತ್ ಅವರ ಯಾವೊಂದು ಸಿನಿಮಾವು ತೆರೆ ಕಂಡಿಲ್ಲ. ಹಾಗಾಗಿ, ಸದ್ಯ ಅವರ ಫ್ಯಾನ್ಸ್ ಗಮನವೆಲ್ಲ 'ಅಣ್ಣಾಥೆ' ಮೇಲೆ ನೆಟ್ಟಿದೆ..

Rajinikanth's 'Annaatthe' to Get 1193 Screen Overseas Release
Rajinikanth's 'Annaatthe' to Get 1193 Screen Overseas Release

By

Published : Nov 2, 2021, 7:16 PM IST

ಚೆನ್ನೈ: ರಜನಿಕಾಂತ್​ ನಟನೆಯ ಬಹುನಿರೀಕ್ಷಿತ ಚಿತ್ರ 'ಅಣ್ಣಾಥೆ' ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಕೊವೀಡ್​ ಮೊದಲ ಮತ್ತು ಎರಡನೇ ಅಲೆ ಬಳಿಕ ದಾಖಲೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಚಿತ್ರತಂಡ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದೆ.

ಅಣ್ಣಾಥೆ ಚಿತ್ರದ ಪೋಸ್ಟರ್​

ಇದೇ ನವೆಂಬರ್​ 4ರಂದು 'ಅಣ್ಣಾಥೆ' ಚಿತ್ರವು ವಿದೇಶಿ ನೆಲದಲ್ಲಿ ಒಟ್ಟು 1193 ಚಿತ್ರಮಂದಿರಗಳಲ್ಲಿ ಬಿಡುಯಾಗಲಿದೆಯಂತೆ. ಈ ವಿಷಯವನ್ನು ಚಿತ್ರತಂಡವೇ ಬಹಿರಂಗಪಡಿಸಿದೆ. ಬಿಡುಗಡೆಯಾಗಲಿರುವ ದೇಶಗಳು ಮತ್ತು ಚಿತ್ರಮಂದಿರಗಳ ಸಂಖ್ಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ.

  • ಅಮೆರಿಕ ರಾಜ್ಯಗಳ ಒಕ್ಕೂಟ (USA) - 677
  • ಸಂಯುಕ್ತ ಅರಬ್ ಸಂಸ್ಥಾಪನೆಗಳು (UAE) - 117
  • ಮಲೇಷ್ಯಾ - 110
  • ಶ್ರೀಲಂಕಾ - 86
  • ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ (ANZ) - 85
  • ಯುರೋಪ್ ರಾಷ್ಟ್ರ - 43
  • ಇಂಗ್ಲಂಡ್​ (UK) - 35
  • ಸಿಂಗಾಪುರ - 23
  • ಕೆನಡಾ -17 ಚಿತ್ರಮಂದಿರಲ್ಲಿ ಪ್ರದರ್ಶನ ಕಾಣಲಿದೆ.
    ಬಿಡುಗಡೆಯಾಗಲಿರುವ ದೇಶಗಳು ಮತ್ತು ಚಿತ್ರಮಂದಿರಗಳ ವಿವರ

ಅಜಿತ್ ಜೊತೆಗೆ ವಿಶ್ವಾಸಂ, ವೀರಂ ಅಂತಹ ಹಿಟ್ ಸಿನಿಮಾಗಳನ್ನು ಮಾಡಿರುವ ಶಿವ ಮೊದಲ ಬಾರಿಗೆ ರಜನಿಕಾಂತ್​​ಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ನಯನತಾರಾ, ಕೀರ್ತಿ ಸುರೇಶ್‌ ಸೇರಿದಂತೆ ದಶಕಗಳ ಹಿಂದೆ ರಜನಿ ಜೊತೆ ಡ್ಯುಯೆಟ್ ಹಾಡಿದ್ದ ಮೀನಾ, ಖುಷ್ಬೂ ಕೂಡ ಈ ಸಿನಿಮಾದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ಜಾಕಿಶ್ರಾಫ್‌, ಪ್ರಕಾಶ್ ರೈ, ಸತೀಶ್, ಸೂರಿ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ದೀಪಾವಳಿ ಉಡುಗೊರೆಯಾಗಿ ನವೆಂಬರ್ 4ರಂದು ಬಿಡುಗಡೆಯಾಗಲಿದೆ. ತೆಲುಗಿನಲ್ಲಿ 'ಪೆದ್ದಣ್ಣ'ನಾಗಿ ರಜನಿ ಅಬ್ಬರಿಸಲಿದ್ದಾರೆ.

ABOUT THE AUTHOR

...view details