ಗಣೇಶ ಚತುರ್ಥಿಯಂದು 'ತಲೈವಾ' ರಜಿನಿಕಾಂತ್ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ದೊರೆತಿದೆ. ರಜಿನಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಅಣ್ಣಾತೆ'ಯ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಮೋಷನ್ ಪೋಸ್ಟರ್ನಲ್ಲಿ ರಜನಿ ಕೆನೆ ಬಣ್ಣದ ಶರ್ಟ್ ಧರಿಸಿದ್ದು, ಬೈಕ್ನಲ್ಲಿ ಸವಾರಿ ಮಾಡುತ್ತಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಿರುಥೈ ಶಿವ ನಿರ್ದೇಶನದ ಸಿನಿಮಾದಲ್ಲಿ ನಯನತಾರಾ, ಕೀರ್ತಿ ಸುರೇಶ್, ಖುಷ್ಬು ಸುಂದರ್ ಮತ್ತು ಮೀನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜಿನಿ ಊರಿನ ಮುಖಂಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಣ್ಣಾತೆ ಕೌಟುಂಬಿಕ ಚಿತ್ರ. ಜನರು ಯಾವುದೇ ಹಿಂಜರಿಕೆ ಇಲ್ಲದೆ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸಬಹುದು. ಪರ್ಫೆಕ್ಟ್ ಫ್ಯಾಮಿಲಿ ಡ್ರಾಮಾ ಆಗಿದ್ದು, ಹಾಸ್ಯ ಮತ್ತು ಫ್ಯಾಮಿಲಿ ಎಮೋಷನ್ಸ್‌ಗೆ ಜಾಸ್ತಿ ಒತ್ತು ನೀಡಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಸನ್ ಪಿಕ್ಚರ್ಸ್ ಅದ್ಧೂರಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಡಿ.ಇಮ್ಮಾನ್ ಸಂಗೀತ ನೀಡಿದ್ದಾರೆ. ಅಣ್ಣಾತೆ ರಜಿನಿಕಾಂತ್ ಅವರ 168ನೇ ಸಿನಿಮಾ ಆಗಿದ್ದು, ದೀಪಾವಳಿ ಸಮಯದಲ್ಲಿ (ನವೆಂಬರ್ 4) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಶಿವಾಜಿ ಸುರತ್ಕಲ್-2 ಪೋಸ್ಟರ್ ಬಿಡುಗಡೆ.. ಡಿಟೆಕ್ಟರ್ ಆಗಿ ಕಥೆ ಹೇಳಲಿದ್ದಾರೆ ರಮೇಶ್ ಅರವಿಂದ್..