ಕರ್ನಾಟಕ

karnataka

ETV Bharat / sitara

ರಜನೀಕಾಂತ್ ಅಭಿನಯದ 'ದರ್ಬಾರ್' ಹೊಸ ಮೋಷನ್ ಪೋಸ್ಟರ್​​​​​​​​​​​​​​​​​​ ರಿಲೀಸ್​​​​​​​ - ದರ್ಬಾರ್ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್

'ದರ್ಬಾರ್' ಚಿತ್ರದ ತೆಲುಗು ಭಾಷೆಯ ಮೋಷನ್ ಪೋಸ್ಟರನ್ನು ಸೂಪರ್​ ಸ್ಟಾರ್ ಮಹೇಶ್‌ಬಾಬು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನೀಕಾಂತ್, ಆದಿತ್ಯ ಅರುಣಾಚಲಂ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಜನೀಕಾಂತ್ 'ದರ್ಬಾರ್'

By

Published : Nov 7, 2019, 8:23 PM IST

'ದರ್ಬಾರ್', ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಮುಂದಿನ ಸಿನಿಮಾ. ಆ್ಯಕ್ಷನ್ ಹಾಗೂ ಮನರಂಜನೆ ಕಾಂಬಿನೇಷನ್ ಇರುವ ಈ ಚಿತ್ರವನ್ನು ಎ.ಆರ್​. ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಕೆಲವು ದಿನಗಳ ಹಿಂದೆ ಚಿತ್ರತಂಡ ​​ರಜನೀಕಾಂತ್ ಫಸ್ಟ್​​​ಲುಕ್ ಬಿಡುಗಡೆ ಮಾಡಿತ್ತು. ಇದೀಗ ಹೊಸ ಮೋಷನ್ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ತೆಲುಗು ಭಾಷೆಯ ಮೋಷನ್ ಪೋಸ್ಟರನ್ನು ಸೂಪರ್​ ಸ್ಟಾರ್ ಮಹೇಶ್‌ಬಾಬು ಬಿಡುಗಡೆ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಮಹೇಶ್ ಬಾಬು ಶೇರ್ ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಜನೀಕಾಂತ್, ಆದಿತ್ಯ ಅರುಣಾಚಲಂ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜೋಡಿಯಾಗಿ ನಯನತಾರಾ ನಟಿಸುತ್ತಿದ್ದಾರೆ. ಇವರೊಂದಿಗೆ ನಿವೇದಾ ಥಾಮಸ್, ಸುನಿಲ್ ಶೆಟ್ಟಿ, ಯೋಗಿ ಬಾಬು, ಸಿಮ್ರಾನ್​ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್​ ರವಿಚಂದರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಸಿನಿಮಾವನ್ನು ಶುಭಾಷ್ ಕರಣ್ ನಿರ್ಮಿಸುತ್ತಿದ್ದಾರೆ.

ABOUT THE AUTHOR

...view details