ಕರ್ನಾಟಕ

karnataka

ETV Bharat / sitara

ತೂತುಕುಡಿ ಹಿಂಸಾಚಾರ: ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಲಿಖಿತ ರೂಪದಲ್ಲಿ ಉತ್ತರಿಸುತ್ತೇನೆ : ತಲೈವಾ

ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ನ್ಯಾಯಾಧೀಶ ಅರುಣ್ ಜಗದೀಶ್​ ಕಮಿಷನ್​​​ ಹಿರಿಯ ನಟ ರಜನಿಕಾಂತ್ ಅವ​ರನ್ನು ವಿಚಾರಣೆಗೆ ಹಾಜರಾಗುವಂತೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರಜಿನಿಕಾಂತ್​​, ಸಾರ್ವಜನಿಕ ಹಿತಾಸಕ್ತಿ ಮೇರೆಗೆ ನಾನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸುತ್ತೇನೆ ಎಂದು ಉತ್ತರಿಸಿದ್ದಾರೆ.

Rajinikanth
ರಜಿನಿಕಾಂತ್​

By

Published : Feb 22, 2020, 8:24 PM IST

ಚೆನ್ನೈ: 2018ರಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ನ್ಯಾಯಾಧೀಶ ಅರುಣ್ ಜಗದೀಶ್​ ಕಮಿಷನ್​​​ ಹಿರಿಯ ನಟ ರಜನಿಕಾಂತ್​ರನ್ನು ವಿಚಾರಣೆಗೆ ಹಾಜರಾಗುವಂತೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರಜಿನಿಕಾಂತ್​​, ಸಾರ್ವಜನಿಕ ಹಿತಾಸಕ್ತಿ ಮೇರೆಗೆ ನಾನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸುತ್ತೇನೆ ಎಂದು ಉತ್ತರಿಸಿದ್ದಾರೆ.

ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂಬ ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ತಮಿಳುನಾಡು ಜನರು 2018 ಮೇ 22ರಂದು ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 13 ಮಂದಿ ಮೃತಪಟ್ಟಿದ್ದರು.

ಈ ಸಂಬಂಧ ತಮಿಳುನಾಡು ಸರ್ಕಾರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯಾರೆಲ್ಲ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ಮಾಡಲು ನ್ಯಾ. ಅರುಣ್​​ ಜಗದೀಶ್​​ ನೇತೃತ್ವದ ಕಮಿಷನ್​ ನೇಮಕ ಮಾಡಿದೆ. ಈ ಕಮಿಷನ್​ ರಜಿನಿಕಾಂತ್​​ರನ್ನು ಇದೇ ಫೆಬ್ರವರಿ 25ರೊಳಗೆ ಹಾಜರಾಗುವಂತೆ ಕೇಳಿಕೊಂಡಿತ್ತು.

ABOUT THE AUTHOR

...view details