ಹೈದರಾಬಾದ್:ಸೂಪರ್‌ಸ್ಟಾರ್ ರಜಿನಿಕಾಂತ್ (Rajinikanth) ಪುನೀತ್ (Powerstar Puneeth Rajkumar) ಅವರನ್ನು ನೆನೆದು ಭಾವುಕರಾಗಿದ್ದಾರೆ. ಅಪ್ಪು ಇಲ್ಲ ಎಂಬ ವಿಚಾರವನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನೀವಿಲ್ಲದ ನಿಜವನ್ನು ಈಗಲೂ ನಂಬೋಕೆ ಆಗ್ತಿಲ್ಲ: ರಜಿನಿಕಾಂತ್ ಕಂಬನಿ - puneeth rajkumar
ಅಪ್ಪು ಇಲ್ಲ ಎಂಬ ಸತ್ಯವನ್ನು ಈಗಲೂ ನಂಬಲಾಗುತ್ತಿಲ್ಲ ಎಂದು ರಜಿನಿಕಾಂತ್ (Rajinikanth) ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ರಜನಿಕಾಂತ್ ಟ್ವೀಟ್ ಮೂಲಕ ಶ್ರದ್ಧಾಂಜಲಿ; ನೆಟ್ಟಿಗರು ಫುಲ್ ಗರಂ
ಅಕ್ಟೋಬರ್ 29 ರಂದು ನಟ ಪುನೀತ್ ರಾಜ್‌ಕುಮಾರ್ ಹೃದಯಸ್ತಂಭನದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಬಾಲಿವುಡ್, ಟಾಲಿವುಡ್, ಕಾಲಿವುಡ್‌ನ ಹಿರಿಯ, ಕಿರಿಯ ನಟ-ನಟಿಯರು, ರಾಜಕಾರಣಿಗಳು, ಸ್ವಾಮೀಜಿಗಳು ಅಪ್ಪು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಅನೇಕ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
Last Updated : Nov 10, 2021, 6:59 PM IST