ಚೆನ್ನೈ (ತಮಿಳುನಾಡು):ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಅವರು ತಮಿಳುನಾಡು ರಾಜ್ಯದ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದಾರೆ. ಸ್ವತಃ ತಾವೇ ರಾಜ್ಯದ ಕಾರ್ಯಾಲಯಕ್ಕೆ ಬಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಚೆಕ್ ಹಸ್ತಾಂತರಿಸಿದ್ದಾರೆ.
ತಮಿಳುನಾಡು ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ ರಜಿನಿಕಾಂತ್ - soundarya rajnikanth
ರಾಜ್ಯದ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿರುವ ನಟ ರಜಿನಿಕಾಂತ್, ತಮಿಳುನಾಡು ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದಾರೆ.
ತಲೈವಾ
"ಕೊರೊನಾ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸರ್ಕಾರ ಹೇರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ತಲೈವಾ ಜನರಲ್ಲಿ ಮನವಿ ಮಾಡಿದ್ದಾರೆ.
ಮೊನ್ನೆಯಷ್ಟೇ ರಜಿನಿಕಾಂತ್ ಮಗಳು ಸೌಂದರ್ಯ ರಜಿನಿಕಾಂತ್ ಹಾಗೂ ಆಕೆಯ ಪತಿಯ ಕುಟುಂಬ ಸಿಎಂ ಕಚೇರಿಗೆ ಆಗಮಿಸಿ ತಮ್ಮ ಔಷಧ ಕಂಪನಿಯಾದ ಅಪೆಕ್ಸ್ ಲ್ಯಾಬೋರೇಟರಿ ಪರವಾಗಿ ಕೋವಿಡ್ ವಿರುದ್ಧದ ರಾಜ್ಯದ ಹೋರಾಟಕ್ಕಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಚೆಕ್ ನೀಡಿದ್ದರು.