ಕರ್ನಾಟಕ

karnataka

ದಾಂಪತ್ಯ ಜೀವನಕ್ಕೆ ಮರಳಿದ ರಜನಿ ಪುತ್ರಿ: ಸೌಂದರ್ಯ-ವಿಶಾಗನ್​ ದಂಪತಿಗೆ ಗಣ್ಯರ ಶುಭ ಹಾರೈಕೆ

2017 ರಲ್ಲಿ ಮೊದಲ ಪತಿ ಅಶ್ವಿನ್​​ಗೆ ವಿಚ್ಛೇದನ ನೀಡಿದ್ದ ರಜನಿಕಾಂತ್ ಮೊದಲ ಪುತ್ರಿ ಸೌಂದರ್ಯ ರಜನಿಕಾಂತ್ ಇಂದು ನಟ, ಉದ್ಯಮಿ ವಿಶಾಗನ್​ ವನಂಗಮುಡಿ ಅವರನ್ನು ಚೆನ್ನೈನ ಲೀಲಾಪ್ಯಾಲೇಸ್ ಹೋಟೆಲ್​​ನಲ್ಲಿ ವಿವಾಹವಾಗಿದ್ದಾರೆ.

By

Published : Feb 11, 2019, 1:47 PM IST

Published : Feb 11, 2019, 1:47 PM IST

ಸೌಂದರ್ಯ ರಜನಿಕಾಂತ್ ವಿವಾಹ

ಸೌಂದರ್ಯ ರಜನಿಕಾಂತ್ ವಿವಾಹ
ಸೂಪರ್​ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಇಂದು ನಟ, ಉದ್ಯಮಿ ವಿಶಾಗನ್​ ವನಂಗಮುಡಿ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ದಕ್ಷಿಣ ಭಾರತದ ಸಂಪ್ರದಾಯದಂತೆ ಸೌಂದರ್ಯ ಹಾಗೂ ವಿಶಾಗನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ನಿನ್ನೆ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಇತರರೊಂದಿಗೆ ರಜನಿಕಾಂತ್​ ಕೂಡಾ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದರು. ಸೌಂದರ್ಯ ಈ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮಿಳುನಾಡು ಸಿಎಂ ಎಡಪ್ಪಡಿ ಕೆ. ಪಳನಿಸ್ವಾಮಿ , ಚಿತ್ರನಟ ಕಮಲಹಾಸನ್​, ಸಂಗೀತ ನಿರ್ದೇಶಕ ಅನಿರುಧ್ ಸೇರಿದಂತೆ ಇನ್ನಿತರ ರಾಜಕೀಯ ಗಣ್ಯರು ಹಾಗೂ ಸಿನಿಮಾ ನಟ, ನಟಿಯರು ಸೌಂದರ್ಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು-ವರರಿಗೆ ಶುಭ ಹಾರೈಸಿದರು.

ಸೌಂದರ್ಯ 2017 ರಲ್ಲಿ ತಮ್ಮ ಮೊದಲ ಪತಿ ಅಶ್ವಿನ್​​​​​​ಗೆ ವಿಚ್ಛೇದನ ನೀಡಿದ್ದರು. ಸೌಂದರ್ಯಗೆ 5 ವರ್ಷದ ಒಬ್ಬ ಮಗನಿದ್ದಾನೆ. ಎರಡನೇ ಪತಿ ವಿಶಾಗನ್ ಕೂಡಾ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ. 'ವಂಜಗರ್​ ಉಲಗಮ್' ಸಿನಿಮಾ ಮೂಲಕ ಕಾಲಿವುಡ್​​ನಲ್ಲಿ ವಿಶಾಗನ್ ಸಿನಿಕೆರಿಯರ್ ಆರಂಭಿಸಿದ್ದರು. ಇದರೊಂದಿಗೆ ವಿಶಾಗನ್ ವೈದ್ಯಕೀಯ ಕಂಪನಿಯ ಮಾಲೀಕತ್ವವನ್ನು ಕೂಡಾ ಹೊಂದಿದ್ದಾರೆ. ಕಳೆದ ವರ್ಷವೇ ಸೌಂದರ್ಯ ಹಾಗೂ ವಿಶಾಗನ್​​​ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ವಿಶಾಗನ್ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.

ಸೌಂದರ್ಯ ತನ್ನ ತಂದೆ ರಜನಿಕಾಂತ್​​​​ ಸಿನಿಮಾಗಳಿಗೆ ಫ್ಯಾಶನ್ ಡಿಸೈನಿಂಗ್ ಕೂಡಾ ಮಾಡುತ್ತಿದ್ದಾರೆ. ರಜನಿಕಾಂತ್ ಹಾಗೂ ದೀಪಿಕಾ ಅಭಿನಯದ 'ಕೊಚಾಡಿಯನ್' ಸಿನಿಮಾ ಮೂಲಕ ಸೌಂದರ್ಯ ನಿರ್ದೇಶನಕ್ಕೂ ಇಳಿದಿದ್ದರು. ನಂತರ VIP 2 ಸಿನಿಮಾವನ್ನು ಅವರು ನಿರ್ದೇಶಿಸಿದ್ದರು.

For All Latest Updates

TAGGED:

ABOUT THE AUTHOR

...view details