ದೇಶದ ಕೋಟ್ಯಂತರ ಅಭಿಮಾನಿಗಳ ತಲೈವಾ ಸೂಪರ್ ಸ್ಟಾರ್, ನಟ ರಜಿನಿಕಾಂತ್ ಅವರಿಗೆ ನಿನ್ನೆಯಷ್ಟೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ರಜಿನಿ ಅಭಿಮಾನಿ ಬಳಗ ಹಾಗೂ ಸ್ನೇಹಿತರಿಗೆ ಬಹಳ ಸಂತೋಷ ತಂದಿದೆ. 'ಶಿವಾಜಿ ರಾವ್ ಗಾಯಕ್‍ವಾಡ್' ಆಪ್ತ ಸ್ನೇಹಿತ ರಾಜ್ ಬಹದ್ದೂರ್ ಅವರು ತಮ್ಮ ಬಹುಕಾಲದ ಗೆಳೆಯನ ಸಾಧನೆಯ ಹಾದಿಯನ್ನು ನೆನಪಿಸಿಕೊಂಡರು.
ರಜಿನಿಕಾಂತ್ ಜೊತೆಗಿನ ತಮ್ಮ 50 ವರ್ಷಗಳ ಹಳೇ ಸ್ನೇಹವನ್ನು ರಾಜ್ ಬಹದ್ದೂರ್ ಮೆಲುಕು ಹಾಕಿದರು. ಸಿನಿಮಾ ನಟ ಆಗುವುದಕ್ಕೂ ಮುನ್ನ ರಜಿನಿಕಾಂತ್ ಬಸ್ ಕಂಡಕ್ಟರ್ ಆಗಿದ್ದರು. ಅದೇ ಬಸ್ನಲ್ಲಿ ಚಾಲಕನಾಗಿದ್ದ ರಾಜ್ ಬಹುದ್ದೂರ್ ಅವರು ರಜಿನಿಗೆ ಆಪ್ತ ಸ್ನೇಹಿತನಾಗಿದ್ದರು. ಇಂದಿಗೂ ಅವರ ಸ್ನೇಹ ಹಾಗೆ ಮುಂದುವರಿದಿದೆ.