ಸೂಪರ್ಸ್ಟಾರ್ ರಜನಿಕಾಂತ್ ಹೈದರಾಬಾದ್ನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಜನಿಕಾಂತ್ ಅಣ್ಣಾತೆ ಚಿತ್ರಕ್ಕಾಗಿ ಹೈದರಾಬಾದ್ಗೆ ಬಂದಿದ್ದರು. ರಕ್ತದೊತ್ತಡ ಏರಿಳಿತ ಹಿನ್ನೆಲೆ ರಜಿನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ನಟ ರಜಿನಿಕಾಂತ್ ಹೈದರಾಬಾದ್ ಅಪೊಲೋ ಆಸ್ಪತ್ರೆಗೆ ದಾಖಲು - Rajinikanth Admitted to Apollo hospital
13:11 December 25
ರಜಿನಿಕಾಂತ್ಗೆ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಳೆದ ವರ್ಷ ರಜಿನಿಕಾಂತ್ ಅಭಿನಯಿಸಿದ್ದ ದರ್ಬಾರ್ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ನಂತರ ಅವರು ಅಣ್ಣಾತೆ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಸಿನಿಮಾ ಅನೌನ್ಸ್ ಆಗಿ ಬಹಳ ದಿನಗಳ ನಂತರ ಚಿತ್ರೀಕರಣ ಆರಂಭವಾಗಿರಲಿಲ್ಲ. ಈ ನಡುವೆ ಲಾಕ್ಡೌನ್ ಆರಂಭವಾದ್ದರಿಂದ ಚಿತ್ರೀಕರಣ ಮತ್ತಷ್ಟು ತಡವಾಯ್ತು. ಕೆಲವು ದಿನಗಳ ಹಿಂದೆ ಚಿತ್ರೀಕರಣ ಆರಂಭವಾಗಿತ್ತು. ರಜಿನಿಕಾಂತ್ ಕೂಡಾ 10 ದಿನಗಳ ಹಿಂದೆ ಹೈದರಾಬಾದ್ಗೆ ಬಂದು ನೆಲೆಸಿದ್ದರು. ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಜಿನಿಕಾಂತ್ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ರಕ್ತದೊತ್ತಡ ಏರುಪೇರಾದ ಹಿನ್ನೆಲೆ ಇಂದು ಚಿತ್ರತಂಡ, ರಜಿನಿಕಾಂತ್ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಿದೆ. ವೈದ್ಯರು ತಲೈವಾಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ:ರಜಿನಿ ಹೊಸ ಪಕ್ಷದ ಹೆಸರು, ಚಿಹ್ನೆ ಬಹಿರಂಗ!?
ವಿಶ್ವಾಸಂ, ವೀರಂ, ವೇದಾಳಂ ಸಿನಿಮಾ ನಿರ್ದೇಶಕ ಸಿರುಥೈ ಶಿವ ಅಣ್ಣಾತೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಖುಷ್ಬು, ಕೀರ್ತಿ ಸುರೇಶ್, ಪ್ರಕಾಶ್ ರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ.