ಕರ್ನಾಟಕ

karnataka

ETV Bharat / sitara

ಅವರ ಹಾಡುಗಳನ್ನ ಕೇಳುತ್ತ ಸದಾ ನೆನಪಿಸಿಕೊಳ್ಳುವೆ.. SPB ಶಿಷ್ಯೋತ್ತಮ ರಾಜೇಶ್ ಕೃಷ್ಣನ್ - ಎಸ್​ಪಿಬಿ ಸಾವು

ಶಾಲೆ ಮತ್ತು ಕಾಲೇಜಿನ ಸಮಯದಿಂದಲೇ ಅವರ ಹಾಡುಗಳನ್ನು ಕೇಳಿ ಅಭಿಮಾನಿಯಾಗಿದ್ದೆ. ಮುಂದೊಂದು ದಿನ ಅವರ ಜತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಗುತ್ತೆ ಎಂದು ಭಾವಿಸಿರಲಿಲ್ಲ..

Rajesh Krishnan who spoke about S PB
ಅವರ ಹಾಡುಗಳನ್ನು ಕೇಳುತ್ತಾ ನೆನಪು ಮಾಡಿಕೊಳ್ಳುತ್ತೇನೆ: ರಾಜೇಶ್ ಕೃಷ್ಣನ್

By

Published : Sep 25, 2020, 4:41 PM IST

ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್​ಪಿಬಿ ಅವರು ಹಾಕಿದ ಭಿಕ್ಷೆ. ಇಂಥ ಮತ್ತೊಂದು ಗಾಯಕ ಹುಟ್ಟಿ ಬರಬೇಕೆಂದ್ರೆ ಇನ್ನೂ 500 ವರ್ಷಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ' ಎಂದು ಗಾಯಕ ರಾಜೇಶ್ ಕೃಷ್ಣನ್ ಭಾವುಕರಾಗಿದ್ದಾರೆ.

ಎಸ್​ಪಿಬಿ

‌ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ನಿಧನ ನೋವುಂಟು ಮಾಡಿದೆ. ಶಾಲೆ ಮತ್ತು ಕಾಲೇಜಿನ ಸಮಯದಿಂದಲೇ ಅವರ ಹಾಡುಗಳನ್ನು ಕೇಳಿ ಅಭಿಮಾನಿಯಾಗಿದ್ದೆ ಎಂದಿರುವ ರಾಜೇಶ್​ ಕೃಷ್ಣನ್​, ಮುಂದೊಂದು ದಿನ ಅವರ ಜತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಗುತ್ತೆ ಎಂದು ಭಾವಿಸಿರಲಿಲ್ಲ. ಆದರೆ, ಆ ಗಳಿಗೆಯೂ ನನಗೆ ಸಿಕ್ಕಿತ್ತು.

ಇದೀಗ ಅವರೊಂದಿಗೆ ಕಳೆದ ಆ ಸಮಯ ಮತ್ತು ಬಿಟ್ಟು ಹೋದ ಹಾಡುಗಳನ್ನೇ ಕೇಳುತ್ತ ಅವರ ನೆನಪು ಮಾಡಿಕೊಳ್ಳುತ್ತಿದ್ದೇನೆ ಎಂದು ಶಿಷ್ಯ ರಾಜೇಶ್‌ ಕೃಷ್ಣ ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details