'ಅಮ್ಮನೆ ಮನೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟ ರಾಘವೇಂದ್ರ ರಾಜ್ ಕುಮಾರ್, ಸದ್ಯ ರಾಜತಂತ್ರ ಸಿನಿಮಾ ಜಪ ಮಾಡ್ತಿದ್ದು, ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.
ಟ್ರೈಲರ್ನಿಂದಲೇ ಗಮನ ಸೆಳೆಯುತ್ತಿರುವ ರಾಜತಂತ್ರ ಸಿನಿಮಾ ಹೊಸ ವರ್ಷ ಜನವರಿ 1ಕ್ಕೆ ರಾಜ್ಯಾದ್ಯಂತ, 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಈ ಹಿಂದೆ ರಾಜತಂತ್ರ ಸಿನಿಮಾದ ಟ್ರೈಲರ್ ಅನ್ನು ಪುನೀತ್ ರಾಜ್‍ಕುಮಾರ್ ಲಾಂಚ್ ಮಾಡಿದ್ರು. ಇದೇ ಮೊದಲ ಬಾರಿಗೆ ನಿವೃತ್ತ ಯೋಧನ ಪಾತ್ರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಅನಾರೋಗ್ಯ ಕಾಡ್ತಿದ್ರೂ ರಾಘವೇಂದ್ರ ರಾಜ್‍ಕುಮಾರ್ ಫೈಟ್ ಮಾಡಿದ್ಧಾರೆ.
ರಾಜತಂತ್ರ ಸಿನಿಮಾದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವತ್ಥ್, ನೀನಾಸಂ ಅಶ್ವತ್ಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಸೇರಿದಂತೆ ಸಾಕಷ್ಟು ಜನರ ದೊಡ್ಡ ತಾರಾ ಬಳಗವೇ ಇದೆ.
ರಾಜತಂತ್ರ ಸಿನಿಮಾದಲ್ಲಿ ಯೋಧನಾಗಿ ರಾಘಣ್ಣ ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ, ಈ ಚಿತ್ರವನ್ನ ಪಿ.ವಿ.ಆರ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಶ್ರೀಸುರೇಶ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿಶ್ವಂ ಡಿಜಿಟಲ್ ಮೀಡಿಯಾ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.
ಹೊಸ ವರ್ಷಕ್ಕೆ ರಾಜತಂತ್ರ ಸಿನಿಮಾ ಬಿಡುಗಡೆ