ಚಾಮರಾಜನಗರ/ಚೆನ್ನೈ : ಬಂಡೀಪುರದಲ್ಲಿ 'ಮ್ಯಾನ್ ವರ್ಸಸ್ ವೈಲ್ಡ್' ಸಾಕ್ಷ್ಯಚಿತ್ರ ಚಿತ್ರೀಕರಣ ವೇಳೆ ಸೂಪರ್ ಸ್ಟಾರ್ ರಜಿನಿಕಾಂತ್ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ, ಈ ವರದಿಯಲ್ಲಿ ತಳ್ಳಿ ಹಾಕಿರುವ ಅವರು ತನಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಯಾವುದೇ ರೀತಿಯ ಗಾಯಗಳಾಗಿಲ್ಲ: ರಜಿನಿಕಾಂತ್ ಸ್ಪಷ್ಟನೆ - rajanikanth slip in shooting time
ಬಂಡೀಪುರದಲ್ಲಿ 'ಮ್ಯಾನ್ ವರ್ಸಸ್ ವೈಲ್ಡ್' ಸಾಕ್ಷ್ಯಚಿತ್ರ ಚಿತ್ರೀಕರಣ ವೇಳೆ ಸೂಪರ್ ಸ್ಟಾರ್ ರಜಿನಿಕಾಂತ್ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ, ಈ ವರದಿಯಲ್ಲಿ ತಳ್ಳಿ ಹಾಕಿರುವ ಅವರು ತನಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೂಟಿಂಗ್ ವೇಳೆ ಆಯ ತಪ್ಪಿದ ತಲೈವಾ : ರಜಿನಿಗೆ ಸಣ್ಣ ಪುಟ್ಟ ಗಾಯ!
ಶೂಟಿಂಗ್ ಮುಗಿಸಿ ಬಂಡೀಪುರದಿಂದ ಬೆಂಗಳೂರಿಗೆ ಹಿಂತಿರುಗುವಾಗ ಹಂಗಳ ಮುಖ್ಯ ರಸ್ತೆಯಲ್ಲಿ ರಜನಿಕಾಂತ್ ಕಾರು ನಿಲ್ಲಿಸಿ ಅಭಿಮಾನಿಗಳತ್ತ ಕೈ ಬೀಸಿ ತೆರಳಿದ್ದರು.
ಶೋನಲ್ಲಿ ಭಾಗವಹಿಸಿದ್ದ ರಜನಿಕಾಂತ್ ಚೆನ್ನೈನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಚಿತ್ರೀಕರಣ ಮುಗಿದ ನಂತರ ನಾನು ಮನೆಗೆ ಬಂದಿದ್ದೇನೆ. ನನಗೆ ಗಾಯವಾಗಿದೆ ಎಂಬ ವರದಿ ಎಲ್ಲೆಡೆ ಪ್ರಸಾರವಾಗಿದೆ. ಇದು ನಿಜವಲ್ಲ. ಆ ಸ್ಥಳದಲ್ಲಿ ಮುಳ್ಳುಗಳಿದ್ದವು, ಇದರಿಂದಾಗಿ ತರಚಿದ ಅನುಭವವಾಗಿದೆ ಅಷ್ಟೇ ಎಂದು ಹೇಳಿದ್ದಾರೆ.
Last Updated : Jan 29, 2020, 10:19 AM IST