ಕರ್ನಾಟಕ

karnataka

ETV Bharat / sitara

ಬೆಂಗಳೂರಿಗೆ ಆಗಮಿಸಿದ 'ತಲೈವಾ': ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಜನ - ಬೆಂಗಳೂರಿಗೆ ಆಗಮಿಸಿದ್ದ ರಜನಿ ಕಾಂತ್​​​

ಬೆಂಗಳೂರಿನ ಸಹಕಾರ ನಗರದಲ್ಲಿರುವ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಹೆಸರಾಂತ ತಮಿಳು ನಟ ರಜನಿಕಾಂತ್ ಭಾಗಿಯಾಗಿದ್ದರು.

ರಜನಿಕಾಂತ್​​​

By

Published : Nov 10, 2019, 7:37 PM IST

ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ನೆಚ್ಚಿನ ನಟನ ಜೊತೆ ಒಂದು ಸೆಲ್ಪಿಗಾಗಿ ಫ್ಯಾನ್ಸ್‌ ಮುಗಿ ಬೀಳೋದು ಸಾಮಾನ್ಯ. ಇವತ್ತು 'ತಲೈವಾ' ಬೆಂಗಳೂರಿಗೆ ವಿವಾಹ ಕಾರ್ಯಕ್ರಮದ ನಿಮಿತ್ತ ಆಗಮಿಸಿದಾಗಲೂ ಅದೇ ಪ್ರಸಂಗ ನಡೆಯಿತು.

ರಜನಿಕಾಂತ್​ ನೋಡಲು ಮುಗಿಬಿದ್ದ ಅಭಿಮಾನಿಗಳು

ಸಹಕಾರ ನಗರದಲ್ಲಿರೋ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಜನಿ ಭಾಗಿಯಾಗಿದ್ದರು. ಕುಟುಂಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ABOUT THE AUTHOR

...view details