ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಚಿತ್ರತಂಡ ಶೂಟಿಂಗ್ನಲ್ಲಿ ಭಾಗಿಯಾಗಿದೆ. ಈ ಸಂಬಂಧ ನಡುಗುವ ಚಳಿಯಲ್ಲಿ ಚಿತ್ರತಂಡ ಕಷ್ಟ ಪಡುತ್ತಿರುವುದನ್ನು ಆರ್ಆರ್ಆರ್ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ.
ಆರ್ಆರ್ಆರ್ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ನಿರ್ದೇಶಕ ರಾಜಮೌಳಿ, ಛಾಯಗ್ರಾಹಕ ಸೆಂಥಿಲ್ ಕುಮಾರ್ ಸೇರಿದಂತೆ ಚಿತ್ರತಂಡದವರು ಚಳಿ ತಡೆಯಲಾರದೆ ಹೀಟರ್ಗಳ ಮೊರೆ ಹೋಗಿದ್ದಾರೆ. ರಾತ್ರಿ ವೇಳೆ ಶೂಟಿಂಗ್ ಮಾಡುತ್ತಿದ್ದ ಕಾರ್ಮಿಕರೆಲ್ಲಾ ಮುಖಕ್ಕೆ ಮಾಸ್ಕ್ ಮತ್ತು ಕಿವಿಗಳಿಗೆ ಟವೆಲ್ ಸುತ್ತಿಕೊಂಡು ಕೆಲಸ ಮಾಡುತ್ತಿದ್ದಾರೆ.