ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಾಂಡದ ಟ್ರೇಲರ್ ಅನ್ನು ಜೂನಿಯರ್ ಚಿರು ರಿಲೀಸ್ ಮಾಡುತ್ತಿದ್ದಾನೆ.
ಹೌದು.. ಸದ್ಯ ಇದೇ 19ರಂದು ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೇ ವೇಳೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ಜೂನಿಯರ್ ಚಿರು 'ರಾಜಮಾರ್ತಾಂಡ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾನೆ.
ಚಿರು ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಿದ್ದಾನೆ ಜೂ.ಚಿರು ಇನ್ನು ಈ ಬಗ್ಗೆ ನಿರ್ದೇಶಕ ರಾಮ್ ನಾರಾಯಣ್ ಮಾಹಿತಿ ಹಂಚಿಕೊಂಡಿದ್ದು, ಚಿರು ಪುತ್ರನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಹಾಗೂ ಚಿರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಪ್ಪನ ಸಿನಿಮಾದ ಟ್ರೇಲರ್ನ್ನ ಅವ್ರ ಮಗ ರಿಲೀಸ್ ಮಾಡಲಿದ್ದಾನೆ ಅಂತಾ ನಿರ್ದೇಶಕರು ಹಂಚಿಕೊಂಡಿದ್ದಾರೆ.
ಚಿರು ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಿದ್ದಾನೆ ಜೂ.ಚಿರು ಧ್ರುವ ಸರ್ಜಾ ರಾಜಾಮಾರ್ತಾಂಡ ಸಿನಿಮಾದಲ್ಲಿ ತನ್ನ ಸಹೋದರ ಚಿರುವಿನ ಪಾತ್ರಕ್ಕೆ ಕಂಠದಾನ ಮಾಡಿದ್ದು, ನಿರ್ದೇಶಕ ರಾಮ್ ನಾರಾಯಣ್ ಸಿನಿಮಾ ನಿರ್ದೇಶಿಸಿದ್ದಾರೆ.