ಮುಂಬೈ: ಅಶ್ಲೀಲ ಚಿತ್ರ ಪ್ರಕರಣ ಸಂಬಂಧ ಎರಡು ತಿಂಗಳ ಹಿಂದೆ ಬಂಧಿತನಾರಾಗಿದ್ದ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದ್ದು, ಮಂಗಳವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರಾಜ್ಕುಂದ್ರಾ ತಪ್ಪು ಮಾಡಿದ್ದಕ್ಕಾಗಿಯೇ ಜೈಲಿಗೆ ಕಳುಹಿಸಲಾಯಿತು: ಶೆರ್ಲಿನ್ ಚೋಪ್ರಾ
ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಇದೀಗ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ನಟಿ ಶೆರ್ಲಿನ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ ಕುಂದ್ರಾ ಬಿಡುಗಡೆ ಕುರಿತು ಶೆರ್ಲಿನ್ ಚೋಪ್ರಾ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಮಸೂತ್ರ 3ಡಿ ಚಿತ್ರದ ನಟಿ, ಮಾಡೆಲ್ ಶೆರ್ಲಿನ್ ಚೋಪ್ರಾ , ರಾಜ್ಕುಂದ್ರಾ ಸ್ವತಃ ದುಷ್ಕೃತ್ಯ ಎಸಗಿರುವ ಹಿನ್ನೆಲೆ ಆತನನ್ನು ಜೈಲಿಗೆ ಕಳುಹಿಸಲಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.