'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಎಲ್ಲರ ಮನಗೆದ್ದಿದ್ದ ನಟ ರಾಜ್ ಬಿ. ಶೆಟ್ಟಿ ಅಂಡರ್ ಕರೆಂಟ್ ಆಫೀಸರ್ ಆಗಿ, ನಟಿಸುತ್ತಿರುವ ಮಹಿರಾ ಸಿನಿಮಾ, ಟ್ರೇಲರ್ನಿಂದಲೇ ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದೆ.
ರಿಲೀಸ್ಗೂ ಮುನ್ನ ಡಿಮ್ಯಾಂಡ್.. ಲಂಡನಿನಲ್ಲಿ ಪ್ರದರ್ಶನವಾಯ್ತು ರಾಜ್ ಬಿ. ಶೆಟ್ಟಿ ಸಿನಿಮಾ..! - undefined
ಥ್ರಿಲ್ಲರ್ ಕಥೆ ಹೊಂದಿರುವ 'ಮಹಿರಾ' ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಅದಕ್ಕೂ ಮುನ್ನ ಲಂಡನ್ನಲ್ಲಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.ಲಂಡನ್ ಕನ್ನಡಿಗರು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಮಹಿರಾ' ಸಿನಿಮಾ ಬಿಡುಗಡೆ ದಿನಾಂಕವನ್ನು ಕೂಡಾ ಚಿತ್ರತಂಡ ಅನೌನ್ಸ್ ಮಾಡಿದೆ. ಇನ್ನು ಕರ್ನಾಟದಲ್ಲಿ ರಿಲೀಸ್ ಆಗುವ ಮುನ್ನವೇ ಲಂಡನಿನಲ್ಲಿ ಈ ಚಿತ್ರದ ಪ್ರಿಮಿಯರ್ ಶೋ ಮಾಡಲಾಗಿದೆ. ಲಂಡನ್ನಲ್ಲಿರುವ ಕನ್ನಡಿಗರು ಈ ಥ್ರಿಲ್ಲರ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮಹೇಶ್ ಗೌಡ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ, ರಾಜ್ ಬಿ. ಶೆಟ್ಟಿ ಅಲ್ಲದೇ ಬಾಂಬೆ ರಂಗಭೂಮಿ ಕಲಾವಿದೆ ವರ್ಜಿನಿಯಾ ರೊಡ್ರಿಗಸ್ ಹಾಗೂ ಚೈತ್ರಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ಅಮ್ಮ- ಮಗಳ ಕಥೆ. ವರ್ಜಿನಿಯಾ ರೊಡ್ರಿಗಸ್ ತಾಯಿ ಪಾತ್ರ ಅಲ್ಲದೆ, ಈ ಚಿತ್ರದಲ್ಲಿ ಅಂಡರ್ ಕರೆಂಟ್ ಕಾಪ್ ಆಗಿ ಕಾಣಿಸಿಕೊಂಡಿದ್ದು, ವಿಭಿನ್ನ ಬಗೆಯ ಆ್ಯಕ್ಷನ್ ಕೂಡಾ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜ ವರ್ಜಿನಿಯಾ ಅವರಿಗೆ ಆರು ತಿಂಗಳು ಟ್ರೈನಿಂಗ್ ಕೊಟ್ಟು ಫೈಟ್ ಮಾಡಿಸಿರೋದು ವಿಶೇಷ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಶ್ವಜಿತ್ ರಾವ್ ಹಾಗೂ ಪ್ರತಾಪ್ ಭಟ್ ಬರೆದಿರುವ ಗೀತರಚನೆಗೆ ನೀಲಿಮ್ ರಾವ್ ಹಾಗೂ ರಾಕೇಶ್ ಸಂಗೀತ ನೀಡಿದ್ದಾರೆ. ಲಂಡನ್ ಮೂಲದವರಾದ ವಿವೇಕ್ ಕೋಡಪ್ಪ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಿನಿಮಾ ಇದೇ ಶುಕ್ರವಾರ ಅಂದರೆ ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ.