ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ನಾಯಕಿಯರು ಆ್ಯಕ್ಟಿಂಗ್ ಮೂಲಕ ಕರಿಯರ್ ಆರಂಭಿಸಿ ನಂತರ ಸಿನಿಮಾಗಳನ್ನು ನಿರ್ದೇಶಿಸಿ ನಿರ್ಮಾಪಕ ಪಟ್ಟ ಅಲಂಕರಿಸಿದವರು. ಅಂತಹ ನಟಿಯರಲ್ಲಿ ಪ್ರಿಯಾ ಹಾಸನ್ ಕೂಡಾ ಒಬ್ಬರು. 2003 ರಲ್ಲಿ 'ಬ್ಲ್ಯಾಕ್ ಅ್ಯಂಡ್ ವೈಟ್' ಸಿನಿಮಾ ಮೂಲಕ ನಾಯಕಿ ಆಗಿ ಪ್ರಿಯಾ ಹಾಸನ್ ಚಿತ್ರರಂಗಕ್ಕೆ ಬಂದವರು.
ಜಂಭದ ಹುಡುಗಿ ಪ್ರಿಯಾ ಹಾಸನ್ ಈಗ ರೈತ ಮಹಿಳೆ - Raita Geeta award for Priya hassan
ಆ್ಯಕ್ಟಿಂಗ್ ಮೂಲಕ ಚಿತ್ರರಂಗಕ್ಕೆ ಬಂದ ಪ್ರಿಯಾ ಹಾಸನ್ ನಂತರ ಕೆಲವೊಂದು ಚಿತ್ರಗಳನ್ನು ನಿರ್ದೇಶಿಸಿ ನಂತರ ತೆಲುಗು ಚಿತ್ರರಂಗಕ್ಕೂ ಹೋಗಿ ಬಂದರು. ಮದುವೆ, ಮಗು ಆದ ನಂತರ ಅವರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಕೆಲವು ದಿನಗಳ ಕಾಲ ಚಿತ್ರರಂಗದಿಂದ ದೂರವಿದ್ದ ಪ್ರಿಯಾ ಹಾಸನ್ ಮತ್ತೆ 2007ರಲ್ಲಿ 'ಜಂಭದ ಹುಡುಗಿ' ಆಗಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರಕ್ಕೆ ಸರಿಯಾದ ಮನ್ನಣೆ ಸಿಗದಿದ್ದಾಗ ಪ್ರಿಯಾ ಹಾಸನ್ ಕೋರ್ಟ್ವರೆಗೂ ಹೋಗಿ ಬಂದಿದ್ದರು. ನಂತರ ಈ ಜಂಭದ ಹುಡುಗಿ 'ಬಿಂದಾಸ್ ಹುಡುಗಿ' ಆಗಿ ಆ್ಯಕ್ಷನ್ ಸಿನಿಮಾಗಳತ್ತ ವಾಲಿದರು. 'ಶ್ರೀ ವಾಸವಿ ವೈಭವಮ್' ಚಿತ್ರದ ಮೂಲಕ ಟಾಲಿವುಡ್ಗೂ ಹೋಗಿ ಬಂದರು. ನಂತರ ಮದುವೆ, ಮಗು ಎಂದು ಬ್ಯುಸಿ ಇದ್ದ ಪ್ರಿಯಾ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದರು.
ಇದೀಗ ಪ್ರಿಯಾ ಹಾಸನ್ ರೈತ ಮಹಿಳೆಯಾಗಿ ಬದಲಾಗಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಪ್ರಿಯಾ ಹಾಸನ್ ಬ್ಯುಸಿಯಾಗಿದ್ದು ಅಕ್ಟೋಬರ್ 8 ರಂದು ನಡೆದ ರೈತ ಗೀತಾ ಕಾರ್ಯಕ್ರಮದಲ್ಲಿ ಪ್ರಿಯಾ ಹಾಸನ್ಗೆ ರೈತ ಗೀತಾ ಪ್ರಶಸ್ತಿ ನೀಡಲಾಗಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಈ ಪ್ರಶಸ್ತಿ ಕೃಷಿ ಬದುಕಿನ ಮೊದಲ ಹೆಜ್ಜೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.