ಬೆಂಗಳೂರು:ಸಿಸಿಬಿ ವಿಚಾರಣೆಗಾಗಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೆ ಉಳಿದುಕೊಂಡಿದ್ದ ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡಾ ಮತ್ತೆ ಒಂದೇ ಸೆಲ್ನಲ್ಲಿ ಜೊತೆಯಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊರೊನಾ ಪ್ರಕರಣಗಳು ಇರುವ ಕಾರಣ ಈ ನಟಿಯರನ್ನು ಇಲ್ಲಿಗೆ ಕರೆತಂದಾಗ ಆರಂಭದಲ್ಲಿ ಬೇರೆ ಬೇರೆ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಈ ಇಬ್ಬರೂ ನಟಿಯರಿಗೂ ನೆಗೆಟಿವ್ ಇರುವ ಕಾರಣ ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಇಬ್ಬರಿಗೂ ಮೂರು ಕಾರ್ಪೆಟ್ಗಳನ್ನು ನೀಡಲಾಗಿದ್ದು ಜೈಲಿನಲ್ಲೇ ಇದ್ದು ಅಲ್ಲಿ ಕೊಡುವ ಆಹಾರವನ್ನು ಸೇವಿಸುವುದು ಅನಿವಾರ್ಯವಾಗಿದೆ.