ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಲುಕಿರುವ ನಟಿಯರನ್ನು ವೈದ್ಯಕೀಯ ಪರೀಕ್ಷೆಗೆಂದು ನಿನ್ನೆ ಕೆ.ಸಿ. ಜನರಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಸಮಯದಲ್ಲಿ ರಕ್ತದ ಮಾದರಿ ಪರೀಕ್ಷೆ ನಡೆಸುವಾಗ ನಟಿ ಸಂಜನಾ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಆದರೆ ಅಲ್ಲೇ ಸೈಲೆಂಟಾಗಿದ್ದ ರಾಗಿಣಿ ವೈದ್ಯರಿಗೆ ಯಾಮಾರಿಸಲು ಯತ್ನಿಸಿರುವ ವಿಚಾರ ತಿಳಿದುಬಂದಿದೆ.
ವೈದ್ಯರಿಗೆ ಯಾಮಾರಿಸಲು ಯತ್ನಿಸಿದ ರಾಗಿಣಿ...ನಟಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸರು - Bangalore KC general hospital
ವೈದ್ಯಕೀಯ ಪರೀಕ್ಷೆಯಲ್ಲಿ ಪೊಲೀಸರೊಂದಿಗೆ ಇಬ್ಬರೂ ನಟಿಯರು ಕಿರಿಕ್ ಮಾಡಿಕೊಂಡಿದ್ದಾರೆ. ನಟಿ ರಾಗಿಣಿ ಯೂರಿನ್ ಟ್ಯೂಬ್ನಲ್ಲಿ ನೀರು ಬೆರೆಸಿರುವ ವಿಚಾರ ತಿಳಿದುಬಂದಿದೆ. ವಿಚಾರ ತಿಳಿದ ಪೊಲೀಸರು ರಾಗಿಣಿಗೆ ಎಚ್ಚರಿಕೆ ನೀಡಿದ್ದಾರೆ.
ಮಾದಕ ವಸ್ತು ಸೇವನೆ ದೃಢೀಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಗೆ ಕರೆತಂದಾಗ ನಟಿಯರು ಪೊಲೀಸರು, ವೈದ್ಯರನ್ನು ಯಾಮಾರಿಸಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಯೂರಿನ್ ಟೆಸ್ಟ್ ವೇಳೆ ರಾಗಿಣಿ ಯೂರಿನ್ ಟೆಸ್ಟ್ ಟ್ಯೂಬ್ನಲ್ಲಿ ನೀರು ಬೆರೆಸಿರುವ ವಿಚಾರ ತಿಳಿದುಬಂದಿದೆ. ಇದನ್ನು ಅರಿತ ವೈದ್ಯರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮತ್ತೆ ಹೀಗೆಲ್ಲಾ ಮಾಡಬೇಡಿ ರಾಗಿಣಿ ಎಂದು ಎಚ್ಚರಿಸಿದ್ದಾರೆ. ವೈದ್ಯರು ಮತ್ತೆ ಯೂರಿನ್ ಸಂಗ್ರಹಿಸಿ ಟೆಸ್ಟ್ಗೆ ಕೊಂಡೊಯ್ದಿದ್ದಾರೆ.
ಇದೇ ರೀತಿ ಇಬ್ಬರೂ ನಟಿಯರು ಪೊಲೀಸರು ತನಿಖೆಯಿಂದ ತಪ್ಪಿಸಿಕೊಳ್ಳಲು ಒಂದೊಂದು ನಾಟಕವಾಡುತ್ತಿರುವುದು ವೈದ್ಯರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿ ಪರಿಣಿಮಿಸಿದೆ.