ಕರ್ನಾಟಕ

karnataka

ETV Bharat / sitara

ಕೊರೊನಾ ವಾರಿಯರ್ಸ್​ಗೆ ಅಡುಗೆ ತಯಾರಿಸಲು ಕಿಚನ್​ ಬಾಡಿಗೆ ಪಡೆದ ನಟಿ ರಾಗಿಣಿ! - Ragini kitichen

ಕೊರೊನಾ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಆಹಾರ ತಯಾರಿಸಲು ನಟಿ ರಾಗಿಣಿ ದ್ವಿವೇದಿ ಮಾಗಡಿ ರಸ್ತೆಯಲ್ಲಿ ಕಿಚನ್ ಬಾಡಿಗೆ ಪಡೆದು ಅಲ್ಲಿಯೇ ಆಹಾರ ತಯಾರಿಸಿ ಆಸ್ಪತ್ರೆ ಸಿಬ್ಬಂದಿಗೆ ಊಟ ನೀಡುತ್ತಿದ್ದಾರೆ.

Ragini
ರಾಗಿಣಿ

By

Published : May 12, 2020, 12:13 AM IST

ಡೆಡ್ಲಿ ವೈರಸ್ ಕೊರೊನಾ ಸೋಂಕಿತರಿಗೆ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್​ಗಳಿಗೆ ಊಟದ ವ್ಯವಸ್ಥೆ ಮಾಡುವ ಸಲುವಾಗಿ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಖಾಸಗಿ ಕಿಚನ್ ಒಂದನ್ನು ಬಾಡಿಗೆಗೆ ಪಡೆದು ದಿನವೂ 500 ಕೊರೊನಾ ವಾರಿಯರ್ಸ್​ಗೆ ಊಟ ಪೂರೈಕೆ ಮಾಡ್ತಿದ್ದಾರೆ.

ಕೊರೊನಾ ವಾರಿಯರ್ಸ್ ಸೇವೆಗೆ ನಿಂತ ರಾಗಿಣಿ

ಲಾಕ್​ಡೌನ್ ಆದಾಗಿಂದ ನಿರಂತರವಾಗಿ ಹಸಿದವರ ಹೊಟ್ಟೆ ತುಂಬಿಸುವುದರ ಜೊತೆಗೆ ರಾಗಿಣಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹಾಗೂ‌ ನರ್ಸ್​ಗಳಿಗೆ ತಮ್ಮ ಮನೆಯಲ್ಲಿ ಅಡುಗೆ ತಯಾರಿಸಿ ಹಂಚುತ್ತಿದ್ದರು. ಅದರೆ ಸದ್ಯ ಊಟದ ಅಗತ್ಯತೆ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಅಷ್ಟು ಜನರಿಗೆ ಅಡುಗೆ ಮಾಡಲು ಸಾಧ್ಯವಾಗದೆ ಮಾಗಡಿ ರಸ್ತೆಯಲ್ಲಿ ಕಿಚನ್ ಬಾಡಿಗೆ ಪಡೆದು ಅಲ್ಲಿ ಫುಡ್ ತಯಾರಿಸಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡ್ತಿದ್ದಾರೆ.

ಇನ್ನು ಕೊರೊನಾ‌ ವಾರಿಯರ್ಸ್​ಗೆ ರಾಗಿಣಿ ದ್ವಿವೇದಿ ವೆಲ್​ಫೇರ್​ ಮೂಲಕ ಊಟ ಪೂರೈಕೆ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ನಟಿ ರಾಗಿಣಿ‌, ನಮ್ಮ ಮನೆಯಲ್ಲಿ ಜಾಸ್ತಿ ಜನರಿಗೆ ಊಟದ ವ್ಯವಸ್ಥೆ ಮಾಡಲು ಆಗದ ಕಾರಣ ಕಿಚನ್ ಬಾಡಿಗೆ ಪಡೆದಿದ್ದೇನೆ. ನಮ್ಮ ಆರ್​ಡಿ ವೆಲ್​​ಫೇರ್​​​ಗೆ ಸಾಕಷ್ಟು ಜನರು ನೆರವು ನೀಡ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ಒಬ್ಬರ ನೆರವಿಗೆ ಬರುವುದು ಉತ್ತಮ. ಅಲ್ಲದೆ ನಮ್ಮ ಆರ್​ಡಿ ವೆಲ್​ಫೇರ್​​ಗೆ ಸಾಕಷ್ಟು ಜನ ಕರೆ ಮಾಡಿ ನೆರವು ಕೇಳ್ತಾರೆ. ನಾವು ಈಗಾಗಲೇ ಸಾಕಷ್ಟು ಜನರಿಗೆ ಫುಡ್, ಮೆಡಿಸಿನ್ ವ್ಯವಸ್ಥೆ ಮಾಡಿದ್ದೇವೆ ಎಂದು ರಾಗಿಣಿ ಹೇಳಿದರು.

ಅಲ್ಲದೇ ಲಾಕ್​ಡೌನ್ ಸಡಿಲಿಕೆ ಆಗಿದೆ ಎಂದು ಬೇಕಾಬಿಟ್ಟಿ ತಿರುಗಾಡದೆ ಮೊದಲು ಮುನ್ನೆಚ್ಚರಿಕೆ ವಹಿಸಬೇಕಿದೆ. ಇಂತಹ ಸಮಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಹಾಗೆಯೇ ಕಂಟೈನ್​ಮೆಂಟ್​ ಝೋನ್​ನಲ್ಲಿ ಇರುವವರು ದಯವಿಟ್ಟು ಹೊರಗೆ ಬರಬೇಡಿ ಎಂದು ರಾಗಿಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ರು.

ABOUT THE AUTHOR

...view details