ಬೆಂಗಳೂರು : ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ರೋಗಿಗಳ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ನರ್ಸ್‌ಗಳಿಗೆ ನಟಿ ರಾಗಿಣಿ ದ್ವಿವೇದಿ ದಿನಸಿ ಕಿಟ್ ವಿತರಿಸಿದ್ದಾರೆ.
ಲಾಕ್ ಡೌನ್ ಆದಾಗಿನಿಂದ ನಿರಂತರವಾಗಿ ಹಸಿದವರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ನಿರತರಾಗಿರುವ ನಟಿ ರಾಗಿಣಿ, ಇಲ್ಲಿಯವರೆಗೂ ಬಡವರಿಗೆ ನೆರವು ನೀಡುತ್ತಲೇ ಬರುತ್ತಿದ್ದಾರೆ.
ಕೊರೊನಾ ವಾರಿಯರ್ಸ್ಗಳಿಗೆ ದಿನಸಿ ಕಿಟ್ ವಿತರಿಸಿದ ನಟಿ ರಾಗಿಣಿ ಇಂದು ನೆಲಮಂಗಲದಲ್ಲಿ ನಟಿ ರಾಗಿಣಿ 200 ಆಶಾ ಕಾರ್ಯಕರ್ತೆಯರು ಹಾಗೂ 200 ನರ್ಸ್‌ಗಳಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ವಿತರಿಸಿದ್ದಾರೆ.
ಅಲ್ಲದೆ ಒಂದಷ್ಟು ಬಡವರಿಗೆ ಆಹಾರದ ಪೊಟ್ಟಣವನ್ನು ವಿತರಿಸಿದರು. ಲಾಕ್ ಡೌನ್ ವೇಳೆ ಯಾರು ಕೂಡಾ ಹಸಿವಿನಿಂದ ಇರಬಾರದು ಎಂದು ರಾಗಿಣಿ ಪಣ ತೊಟ್ಟು ನಿಂತಿದ್ದಾರೆ. ಅಲ್ಲದೆ ಯಾರಿಗಾದರು ಆಹಾರ ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ತನ್ನಿ, ಕೂಡಲೇ ನಮ್ಮ ತಂಡ ಅವರ ನೆರವಿಗೆ ಬರುತ್ತೇವೆ ಎಂದು ಈಟಿವಿ ಭಾರತಗೆ ರಾಗಿಣಿ ದ್ವಿವೇದಿ ಹೇಳಿದ್ದಾರೆ.