ಕರ್ನಾಟಕ

karnataka

ETV Bharat / sitara

ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮುಂದುವರೆಸಿದ ನಟಿ ರಾಗಿಣಿ ದ್ವಿವೇದಿ! - ರಾಗಿಣಿ ದ್ವಿವೇದಿ ಸಹಾಯ

ಮೊನ್ನೆಯಷ್ಟೇ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ನಿನ್ನೆ ಭಾರತಿ ನಗರದ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದ್ದಾರೆ. ಜಿನೆಕ್ಸ್ಟ್‌ ಚಾರಿಟೇಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಕಾಕ್ಸ್‌ಟೌನ್‌ ಹತ್ತಿರ ಕಲ್ಪಹಳ್ಳಿಯ ಸ್ಮಶಾನದ ಜನರಿಗೆ ಆಹಾರ ಸಾಮಾಗ್ರಿಗಳನ್ನ ವಿತರಿಸಿದ್ದರು.

Ragini dwivedi social services
Ragini dwivedi social services

By

Published : May 6, 2021, 3:01 PM IST

ಸ್ಮಶಾನ ಹಾಗೂ ಚಿತಾಗಾರದ ಸಿಬ್ಬಂದಿಗೆ ಆಹಾರ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದಿದ್ದ ಸ್ಯಾಂಡಲ್​​​ವುಡ್ ನಟಿ ರಾಗಿಣಿ ದ್ವಿವೇದಿ ಇಂದು ಸಹ ಪೌರಕಾರ್ಮಿಕರಿಗೆ ಹಾಗೂ‌ ನಿರ್ಗತಿಕರಿಗೆ ಆಹಾರದ ಪೊಟ್ಟಣ ನೀಡುವ ಕಾರ್ಯ ಮುಂದುವರೆಸಿದ್ದಾರೆ.

ಮೊನ್ನೆಯಷ್ಟೇ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ನಿನ್ನೆ ಭಾರತಿ ನಗರದ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದ್ದಾರೆ. ಜಿನೆಕ್ಸ್ಟ್‌ ಚಾರಿಟೇಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಕಾಕ್ಸ್‌ಟೌನ್‌ ಹತ್ತಿರ ಕಲ್ಪಹಳ್ಳಿಯ ಸ್ಮಶಾನದ ಜನರಿಗೆ ಆಹಾರ ಸಾಮಾಗ್ರಿಗಳನ್ನ ವಿತರಿಸಿದ್ದರು.

ಇಂದು‌ ಪೊಲೀಸರು, ಪೌರಕಾರ್ಮಿಕರು ಹಾಗೂ ನಿರ್ಗತಿಕರಿಗೆ ಆಹಾರದ ಪೊಟ್ಟಣ ನೀಡಿದ್ದಾರೆ. ನಗರದ ಕಂಠೀರವ ಸ್ಟೇಡಿಯಂ ಹಾಗೂ ಎಂ.ಜಿ.ರಸ್ತೆ ಸುತ್ತಮುತ್ತ ಹಸಿವಿನಿಂದ ರಸ್ತೆ ಬದಿ ಕುಳಿತುಕೊಂಡ ಸಾರ್ವಜನಿಕರಿಗೂ ಆಹಾರ ನೀಡುವ‌ ಮೂಲಕ ತಮ್ಮ‌ ಕಳಕಳಿ ತೋರಿಸಿದ್ದಾರೆ.

ABOUT THE AUTHOR

...view details