ಕಳೆದ ನಾಲ್ಕು ತಿಂಗಳಿಂದ ಕರ್ನಾಟಕದಲ್ಲಿ ಕೊರೊನಾ ಹಾವಳಿ ಹೆಚ್ವಾಗಿದೆ. ಎರಡು ತಿಂಗಳು ಲಾಕ್ಡೌನ್ ಆದ ಸಮಯದಲ್ಲಿ ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಕೊರೊನಾ ವಾರಿಯರ್ಸ್ ರೀತಿ ಸಮಾಜಮುಖಿ ಕೆಲಸ ಮಾಡಿ ಗಮನ ಸೆಳೆದಿದ್ರು.
ಕೊರೊನಾ ನಡುವೆಯೂ ಜಾಹೀರಾತು ಶೂಟಿಂಗ್ನಲ್ಲಿ ಬ್ಯುಸಿಯಾದ ತುಪ್ಪದ ಬೆಡಗಿ - Actor Ragini Dwivedi Latest News
ಸಿನಿಮಾ ಶೂಟಿಂಗ್ ಇಲ್ಲದ ಸಮಯದಲ್ಲಿ ನಟಿ ರಾಗಿಣಿ ದ್ವಿವೇದಿ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಖಾಸಗಿ ಸಂಸ್ಥೆಯ ಪ್ರಚಾರಕ್ಕಾಗಿ ಈ ಫೋಟೋ ಶೂಟ್ ಮಾಡಿಸಿದ್ದಾರೆ.
ಪೌರ ಕಾರ್ಮಿಕರು, ಕೂಲಿ ಕಾರ್ಮಿಕರು, ವೈದ್ಯರು ಹಾಗೂ ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನ ರಾಗಿಣಿ ದ್ವಿವೇದಿ ಇವತ್ತಿಗೂ ಮಾಡುತ್ತಾ ಬಂದಿದ್ದಾರೆ. ಸಿನಿಮಾ ಶೂಟಿಂಗ್ ಇಲ್ಲದ ಸಮಯದಲ್ಲಿ ರಾಗಿಣಿ ದ್ವಿವೇದಿ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಯಾವ ಹೊಸ ಸಿನಿಮಾಕ್ಕೆ ಗ್ಲ್ಯಾಮರ್ ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ ಅಂತಾ ಅಂದುಕೊಂಡರೆ ನಮ್ಮ ಊಹೆ ತಪ್ಪಾಗುತ್ತೆ. ಈ ಬೋಲ್ಡ್ ನಟಿ ಖಾಸಗಿ ಕಂಪನಿಯ ಪ್ರಚಾರಕ್ಕಾಗಿ ಈ ಫೋಟೋ ಶೂಟ್ ಮಾಡಿಸಿದ್ದಾರೆ.
ಎರಡು ಟ್ರೆಂಡಿ ಕಾಸ್ಟೂಮ್ನಲ್ಲಿ ರಾಗಿಣಿ ದ್ವಿವೇದಿ ಈ ಫೋಟೋ ಶೂಟ್ ಮಾಡಿಸಿದ್ದಾರೆ. ಸಿನಿಮಾ ಶೂಟಿಂಗ್ ಇಲ್ಲದ ಟೈಮ್ನಲ್ಲಿ ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ರಾಗಿಣಿ ದ್ವಿವೇದಿ ಮಿಂಚುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.