ಕರ್ನಾಟಕ

karnataka

ETV Bharat / sitara

ರಾಗಿಣಿಗಿಲ್ಲ ಇಂದು ಬಿಡುಗಡೆ ಭಾಗ್ಯ..! ಮಗಳ ಬರುವಿಕೆಗೆ ಕಾಯುತ್ತಿದ್ದ ಕುಟುಂಬಸ್ಥರಿಗೆ ನಿರಾಸೆ.. - ನಟಿ ರಾಗಿಣಿಗಿಲ್ಲ ಬಿಡುಗಡೆ ಸುದ್ದಿ

ಇಂದು ರಾಗಿಣಿ ಮನೆಗೆ ಬಂದ ಕೂಡಲೇ ಆಕೆಯಿಂದಲೇ ಸರಳವಾಗಿ ದೇವರ ಪೂಜೆ ಮಾಡಿಸಲು ತಯಾರಿ ನಡೆಸಲಾಗಿತ್ತು, ಆದರೆ ಇವರೆಲ್ಲರಿಗೂ ನಿರಾಸೆ ಉಂಟಾಗಿದೆ.

ragini-dwivedi-has-to-spend-two-days-in-jail
ನಟಿ ರಾಗಿಣಿಗಿಲ್ಲ ಬಿಡುಗಡೆ ಭಾಗ್ಯ..!

By

Published : Jan 23, 2021, 4:45 PM IST

ನಟಿ ರಾಗಿಣಿ ದ್ವಿವೇದಿ ಇಂದು ಜೈಲಿನಿಂದ ಹೊರಬರುವ ಸಾಧ್ಯತೆಗಳಿದ್ದ ಕಾರಣ ಅವರನ್ನು ಬರಮಾಡಿಕೊಳ್ಳಲು ಕುಟುಂಬಸ್ಥರು ಸಜ್ಜಾಗಿದ್ದರು.143 ದಿನಗಳಿಂದ ದೂರವಿದ್ದ ಮನೆ ಮಗಳ ಬರುವಿಕೆಗಾಗಿ ಕಾಯುತ್ತಿರುವ ಕುಟುಂಬ, ರಾಗಿಣಿಯ ಕೈಯಿಂದಲೇ ವಿಶೇಷ ಪೂಜೆ ಮಾಡಿಸುವುದಕ್ಕೆ ಸಿದ್ಧತೆ ಮಾಡಿದ್ದರು.

ಇಂದು ರಾಗಿಣಿ ಮನೆಗೆ ಬಂದ ಕೂಡಲೇ ಆಕೆಯಿಂದಲೇ ಸರಳವಾಗಿ ದೇವರ ಪೂಜೆ ಮಾಡಿಸಲು ತಯಾರಿ ನಡೆಸಲಾಗಿತ್ತು. ಯಾವುದೇ ದೊಡ್ಡ ರೀತಿ ಆಚರಣೆ ಮಾಡದಿರಲು ನಿರ್ಧರಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದ ಆಕೆಯ ಪೋಷಕರೊಂದಿಗೆ ಕೆಲ ಸ್ನೇಹಿತರು ಸಹ ಮನೆಯಲ್ಲಿ ಕಾಯುತ್ತಿದ್ದರು.

ಆದರೆ ಇವರೆಲ್ಲರಿಗೂ ನಿರಾಸೆ ಉಂಟಾಗಿದ್ದು, ರಾಗಿಣಿ ಇನ್ನೂ ಎರಡು ದಿನ ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ. ಜಾಮೀನು ನೀಡಿ ಸುಪ್ರೀಂ ಕೋರ್ಟ್​ ಆದೇಶ ನೀಡಿದ್ದರೂ ನಟಿ ರಾಗಿಣಿ ಮಾತ್ರ ಜೈಲಿನಲ್ಲಿಯೇ ಇರಬೇಕಾಗಿದೆ. ನಾಳೆ ಭಾನುವಾರ ರಜಾದಿನ ಆಗಿರುವ ಕಾರಣ ದಾಖಲಾತಿಗಳನ್ನು ಜೈಲಾಧಿಕಾರಿಗಳಿಗೆ ನೀಡಲು ಸಾಧ್ಯವಾಗದ ಹಿನ್ನೆಲೆ ರಾಗಿಣಿ ಸೋಮವಾರ (ಜನವರಿ 25) ದವರೆಗೆ ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.

ABOUT THE AUTHOR

...view details