ಕರ್ನಾಟಕ

karnataka

ETV Bharat / sitara

ಮಕ್ಕಳೊಂದಿಗೆ ಮಗುವಾದ ರಾಗಿಣಿ: ಮರ ಹತ್ತಿ ನೇರಳೆ ಕಿತ್ತ ತುಪ್ಪದ ಹುಡುಗಿ! - undefined

ನಟಿ ರಾಗಿಣಿ ದ್ವಿವೇದಿ ತಮ್ಮ ಮನೆ ಬಳಿ ಇರುವ ನೇರಳೆ ಮರ ಹತ್ತಿ ಹಣ್ಣುಗಳನ್ನು ಕಿತ್ತಿರುವ ವಿಡಿಯೋ ವೈರಲ್ ಆಗಿದೆ. ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಮನೆಯಲ್ಲಿದ್ದ ರಾಗಿಣಿ ಅಮ್ಮನಿಗಾಗಿ ಮರ ಹತ್ತಿ ಹಣ್ಣುಗಳನ್ನು ಕಿತ್ತಿದ್ದಾರೆ.

ರಾಗಿಣಿ ದ್ವಿವೇದಿ

By

Published : Jun 7, 2019, 8:59 PM IST

Updated : Jun 7, 2019, 9:10 PM IST

ಸಿನಿಮಾ ಸ್ಟಾರ್​​​ಗಳು ತೆರೆ ಮೇಲೆ ಹಾಗೂ ಕಾರ್ಯಕ್ರಮಗಳಲ್ಲಿ ಇರುವಂತೆ ಮನೆಯಲ್ಲಿ ಇರುವುದಿಲ್ಲ. ಮನೆಯವರೊಂದಿಗೆ ಸಾಮಾನ್ಯರಂತೆ ಇರುತ್ತಾರೆ. ಬಿಡುವಿನ ವೇಳೆ ಕುಟುಂಬದವರೊಂದಿಗೆ ಸೇರಿ ಪುಟ್ಟ ಮಕ್ಕಳಂತೆ ಕಾಲ ಕಳೆಯುತ್ತಾರೆ. ಇದಕ್ಕೊಂದು ಹೊಸ ಉದಾಹರಣೆ ನಟಿ ರಾಗಿಣಿ ದ್ವಿವೇದಿ.

ಮರ ಹತ್ತಿ ಹಣ್ಣು ಕೀಳುತ್ತಿರುವ ರಾಗಿಣಿ

ಒಬ್ಬೊಬ್ಬರು ಸೆಲಬ್ರಿಟಿಗಳಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತದೆ. ತೆರೆ ಮೇಲೆ ಗ್ಲಾಮರಸ್ ಆಗಿ, ಬೊಂಬಾಟ್ ಆ್ಯಕ್ಟಿಂಗ್​​​ ಮಾಡುವ ರಾಗಿಣಿ ದ್ವಿವೇದಿ ಮನೆಯಲ್ಲಿ ಮರ ಹತ್ತಿ ನೇರಳೆ ಹಣ್ಣು ಕೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ರಾಗಿಣಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇನ್ನು ಬಹಳ ದಿನಗಳ ನಂತರ ಬಾಂಬೆಯಿಂದ ಬೆಂಗಳೂರಿಗೆ ಬಂದ ಅಮ್ಮನಿಗಾಗಿ ಮನೆಯ ಬಳಿ ಇರುವ ನೇರಳೆ ಮರವೊಂದಕ್ಕೆ ಹತ್ತಿ ನೇರಳೆ ಹಣ್ಣು ಕಿತ್ತುಕೊಟ್ಟಿದ್ದಾರೆ. ರಾಗಿಣಿ ಜೊತೆ ಪುಟ್ಟ ಮಕ್ಕಳು ಕೂಡಾ ಇದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿರುವ ರಾಗಿಣಿಯನ್ನು ನೋಡಿದರೆ, ಸಿನಿಮಾದಲ್ಲಿ ನಟಿಸುವ ಆ ರಾಗಿಣಿ ಇವರೇನಾ ಎನ್ನಿಸುವುದು ಗ್ಯಾರಂಟಿ.

ರಾಗಿಣಿ ದ್ವಿವೇದಿ
Last Updated : Jun 7, 2019, 9:10 PM IST

For All Latest Updates

TAGGED:

ABOUT THE AUTHOR

...view details