ಪ್ರಪಂಚಾದ್ಯಂತ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಇಂದು ಪರಿಸರ ಪ್ರೇಮಿಗಳು ಒಂದೊಂದು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದಾರೆ.
ಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗಿರಬಾರದು...ನಟಿ ರಾಗಿಣಿ - Ragini said man should save environment
ವಿಶ್ವ ಪರಿಸರ ದಿನವಾದ ಇಂದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ತಮ್ಮ ಮನೆ ಬಳಿ ಅರಳಿ ಗಿಡವೊಂದನ್ನು ನೆಟ್ಟು ನೀರು ಹಾಕಿದ್ದಾರೆ. ಪ್ರತಿ ದಿನ ಪರಿಸರ ದಿನವಾಬೇಕು, ಎಲ್ಲರೂ ಪರಿಸರದ ಬಗ್ಗೆ ಕಾಳಜಿ ತೋರುವಂತೆ ಮನವಿ ಮಾಡಿದ್ದಾರೆ.
![ಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗಿರಬಾರದು...ನಟಿ ರಾಗಿಣಿ Ragini DwivedRagini Dwivedi celebrated World Environment dayi](https://etvbharatimages.akamaized.net/etvbharat/prod-images/768-512-7484581-3-7484581-1591343895164.jpg)
ಸ್ಯಾಂಡಲ್ವುಡ್ ನಟಿ, ತುಪ್ಪದ ಹುಡುಗಿ ಎಂದೇ ಹೆಸರಾದ ರಾಗಿಣಿ ಕೂಡಾ ಇಂದು ತಮ್ಮ ಮನೆ ಬಳಿ ಅರಳಿ ಗಿಡವನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ಆದರೆ ಈ ಒಂದು ದಿನಕ್ಕೆ ಮಾತ್ರ ಪರಿಸರ ದಿನ ಸೀಮಿತವಾಗಿರಬಾರದು, ಮನುಷ್ಯ ಮರಗಳನ್ನು ಕಡಿದು, ಅರಣ್ಯ ನಾಶ ಮಾಡುವ ಮೂಲಕ ಪರಿಸರ ನಾಶ ಮಾಡುತ್ತಿದ್ದಾನೆ. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳು, ಪ್ರವಾಹ, ಚಂಡಮಾರುತ, ಸದ್ಯಕ್ಕೆ ಜನರ ಪ್ರಾಣ ಹಿಂಡುತ್ತಿರುವ ಕೊರೊನಾ ಇದೆಲ್ಲಾ ಇದಕ್ಕೆ ಸಾಕ್ಷಿ. ತನ್ನನ್ನು ನಾಶ ಮಾಡಲು ಯತ್ನಿಸುವ ಮನುಷ್ಯನ ಮೇಲೆ ಪ್ರಕೃತಿ ಕೂಡಾ ಸೇಡು ತೀರಿಸಿಕೊಳ್ಳುತ್ತಿದೆ. ಆದ್ದರಿಂದ ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದಿದ್ದಾರೆ.
ಇವೆಲ್ಲದರ ಜೊತೆಗೆ ಕೇರಳದಲ್ಲಿ ನಡೆದ ಗರ್ಭಿಣಿ ಕಾಡಾನೆಯ ಸಾವು ಕೂಡಾ ನಿಜಕ್ಕೂ ಬೇಸರದ ಸಂಗತಿ. ಈ ಕಾರಣಕ್ಕೆ ಪರಿಸರ ಯಾವುದೋ ಒಂದು ರೂಪದಲ್ಲಿ ಬಂದು ಜನರ ಮೇಲೆ ತನ್ನ ಕೋಪವನ್ನು ತೀರಿಸಿಕೊಳ್ಳುತ್ತಿದೆ. ಇನ್ನು ಮುಂದೆಯಾದರೂ ಮನುಷ್ಯ ಅರಣ್ಯ ನಾಶ, ಮೂಕಪ್ರಾಣಿಗಳ ಮೇಲೆ ದರ್ಪ ತೊರಬಾರದು. ಹೀಗೆ ಮನುಷ್ಯ ಪರಿಸರವನ್ನು ನಾಶ ಮಾಡುತ್ತಿದ್ರೆ ಮುಂದಿನ ದಿನಗಳಲ್ಲಿ ಪರಿಸರ ಮನುಷ್ಯರನ್ನು ನಾಶ ಮಾಡುವುದು ಗ್ಯಾರಂಟಿ. ಪ್ರತಿ ದಿನ ಪರಿಸರವನ್ನು ಕಾಪಾಡಬೇಕು, ಗೌರವಿಸಬೇಕು ಎಂದು ರಾಗಿಣಿ ಅಭಿಪ್ರಾಯಪಟ್ಟಿದ್ದಾರೆ.