ಸ್ಯಾಂಡಲ್ವುಡ್ ನಟ-ನಟಿಯರ ಡ್ರಗ್ಸ್ ನಂಟಿನ ವಿಚಾರಣೆಗೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿದ ಮಾಹಿತಿ ಆಧಾರದ ಮೇರೆಗೆ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿಗೆ ನೋಟೀಸ್ ನೀಡಿದ್ದರು. ಆದರೆ ರಾಗಿಣಿ ಇಂದು ವಿಚಾರಣೆಗೆ ಹಾಜರಾಗಿಲ್ಲ.
ಸಿಸಿಬಿ ವಿಚಾರಣೆಗೆ ಗೈರು...ರಾಗಿಣಿ ನೀಡಿದ ಕಾರಣ ಏನು...? - Ragini absent for CCB interrogation
ನಟಿ ರಾಗಿಣಿಗೆ ನಿನ್ನೆ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ ರಾಗಿಣಿ ಸಮಯದ ಅಭಾವದಿಂದ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ಸೋಮವಾರ ಹಾಜರಾಗಲಿದ್ದೇನೆ ಎಂದು ತಿಳಿಸಿದ್ದಾರೆ.

ರಾಗಿಣಿ
ವಿಚಾರಣೆಗೆ ಗೈರಾಗಿರುವುದಕ್ಕೆ ರಾಗಿಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಾರಣ ತಿಳಿಸಿದ್ದಾರೆ. 'ನನಗೆ ನಿನ್ನೆಯಷ್ಟೇ ನೋಟೀಸ್ ಸಿಕ್ಕಿದೆ. ಆದರೆ ಇಂದು ನಾನು ಸಮಯದ ಅಭಾವದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ನನ್ನ ವಕೀಲರು ಅಧಿಕಾರಿಗಳ ಮುಂದೆ ಹಾಜರಾಗಿ ನನ್ನ ಕಷ್ಟದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಸೋಮವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲಿದ್ದೇನೆ' ಎಂದು ರಾಗಿಣಿ ದ್ವಿವೇದಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.