ಸ್ಯಾಂಡಲ್ವುಡ್ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನಿರಂತರವಾಗಿ ನೆರವಾಗುತ್ತಾ ಬಂದಿದ್ದು, ಅದೇ ರೀತಿ ಮಂಗಳವಾರ ಹೋಟೆಲ್ಗಳಲ್ಲಿ ಕೆಲಸ ಮಾಡುವ 200 ಕಾರ್ಮಿಕರಿಗೆ ಅಗತ್ಯ ದಿನಸಿ ಕಿಟ್ ವಿತರಿಸಿದ್ದಾರೆ.
ಹೋಟೆಲ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ನಟಿ ರಾಗಿಣಿ - ದಿನಸಿ ಕಿಟ್ ವಿತರಿಸಿದ ರಾಗಿಣಿ
ಸ್ಯಾಂಡಲ್ವುಡ್ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಂಗಳವಾರ ಹೋಟೆಲ್ಗಳಲ್ಲಿ ಕೆಲಸ ಮಾಡುವ 200 ಕಾರ್ಮಿಕರಿಗೆ ಅಗತ್ಯ ದಿನಸಿ ಕಿಟ್ ವಿತರಿಸಿದ್ದಾರೆ.
ಹೋಟೆಲ್ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ರಾಗಿಣಿ
ಲಾಕ್ಡೌನ್ ಆದಾಗಿನಿಂದಲೂ ಆರ್ಡಿ ವೆಲ್ಫೇರ್ ಮೂಲಕ ನಿರಂತರವಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ರಾಗಿಣಿ, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಯಾರಾದ್ರು ಕಷ್ಟ ಎಂದು ಮನವಿ ಮಾಡಿದ್ರೆ ರಾಗಿಣಿ ಟೀಂ ಅವರ ಬಗ್ಗೆ ಪೂರ್ತಿ ಮಾಹಿತಿ ಸಂಗ್ರಹಿಸಿ ಆರ್ಡಿ ವೆಲ್ಫೇರ್ ಮೂಲಕ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದಾರೆ.
ಇನ್ನು, ಆರ್ಡಿ ವೆಲ್ಫೇರ್ಗೆ ರಾಗಿಣಿ ಸ್ನೇಹಿತರು, ಕುಟುಂಬದವರು ಹಾಗೂ ಕೆಲ ರಾಜಕಾರಣಿಗಳು ದೇಣಿಗೆ ನೀಡುವ ಮೂಲಕ ಸಾಥ್ ನೀಡಿದ್ದಾರೆ.