ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಭಾರೀ ಕುತೂಹಲ ಕೆರಳಿಸಿರುವ ಸಿನಿಮಾ. ಯಶಸ್ವಿ ಜೋಡಿ ಅಂತಾನೆ ಕರೆಸಿಕೊಳ್ಳುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಜೋಡಿ 'ರಾಜಕುಮಾರ' ಚಿತ್ರದ ನಂತ್ರ ಮತ್ತೆ ಈ ಸಿನಿಮಾದಲ್ಲಿ ಒಂದಾಗಿದ್ದಾರೆ.
'ಯುವರತ್ನ' ಸೆಟ್ನಲ್ಲಿ ರಾಘಣ್ಣ: ಮತ್ತೆ ಚಿತ್ರತಂಡ ಸೇರಿಕೊಂಡ ಸಯೇಶಾ ಸೈಗಲ್ - undefined
ಸಂತೋಷ್ರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್ಕುಮಾರ್ ಅಭಿನಯಿಸುತ್ತಿರುವ 'ಯುವರತ್ನ' ಸಿನಿಮಾದ ಮೂರನೇ ಹಂತದ ಶೂಟಿಂಗ್ ಭರದಿಂದ ಸಾಗಿದೆ. ಶೂಟಿಂಗ್ ಸೆಟ್ಗೆ ನಿನ್ನೆ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದರು.
ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಬೆಂಗಳೂರಿನಲ್ಲಿ 'ಯುವರತ್ನ' ಶೂಟಿಂಗ್ ನಡೆಯುತ್ತಿದ್ದು ಶೂಟಿಂಗ್ ಸೆಟ್ಗೆ ಪುನೀತ್ ಸಹೋದರ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿದ್ದಾರೆ. ರಾಘಣ್ಣನ ಭೇಟಿ ಈಗ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ತಮ್ಮನ ಚಿತ್ರದಲ್ಲಿ ರಾಘಣ್ಣ ಆ್ಯಕ್ಟ್ ಮಾಡ್ತಾರಾ ಎಂಬ ಕುತೂಹಲ ದೊಡ್ಮನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಇನ್ನು ಈ ಚಿತ್ರದಲ್ಲಿ ಪುನೀತ್ಗೆ ನಾಯಕಿಯಾಗಿ ನಟಿಸಿರುವ ಸಯೇಶಾ ಸೈಗಲ್ ಮದುವೆಯಾದ ಮೇಲೆ ಮತ್ತೆ 'ಯುವರತ್ನ' ಟೀಂ ಸೇರಿಕೊಂಡಿದ್ದಾರೆ .ಇತ್ತೀಚಿಗಷ್ಟೆ ತಮಿಳು ನಟ ಆರ್ಯ ಅವರನ್ನು ಸಯೇಶ ವರಿಸಿದ್ದರು. 'ಯುವರತ್ನ' ಸಿನಿಮಾ ಸಯೇಶಾ ನಟಿಸಿರುವ ಮೊದಲ ಕನ್ನಡ ಸಿನಿಮಾ.