ಕರ್ನಾಟಕ

karnataka

ETV Bharat / sitara

ಅಪ್ಪು ಅಭಿನಯದ 'ಜೇಮ್ಸ್'ಗೆ ರಾಘಣ್ಣ ಡಬ್ಬಿಂಗ್: ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ - puneet rajkumar james film

ದಿ. ಪುನೀತ್​ ರಾಜ್​ಕುಮಾರ್​​ ಅಭಿನಯದ 'ಜೇಮ್ಸ್' ಚಿತ್ರದ ತಮ್ಮ ಪಾತ್ರಕ್ಕೆ ರಾಘವೇಂದ್ರ ರಾಜ್ ಕುಮಾರ್ ಡಬ್ಬಿಂಗ್ ಮಾಡಿರುವ ಫೋಟೋ, ವಿಡಿಯೋ ಹೊರಬಂದಿದೆ.

Raghvendra rajkumar dubbing for 'James' film
'ಜೇಮ್ಸ್'ಗೆ ರಾಘಣ್ಣ ಡಬ್ಬಿಂಗ್

By

Published : Feb 5, 2022, 12:04 PM IST

ಬೆಂಗಳೂರು: ನಟ ರಾಘವೇಂದ್ರ ರಾಜ್ ಕುಮಾರ್ ಅವರು ದಿ. ಪುನೀತ್​ ರಾಜ್​ಕುಮಾರ್​​ ಅಭಿನಯದ 'ಜೇಮ್ಸ್' ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವ ಫೋಟೋ, ವಿಡಿಯೋ ಹೊರಬಂದಿದೆ. ಇದು ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದ್ದು, ನಿರೀಕ್ಷೆ ಹೆಚ್ಚಿಸಿದೆ.

'ಜೇಮ್ಸ್'ಗೆ ರಾಘಣ್ಣ ಡಬ್ಬಿಂಗ್

'ಜೇಮ್ಸ್' ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಖಾತೆಯಲ್ಲಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ. 'ಭರ್ಜರಿ' ಸಿನಿಮಾದ ಬಳಿಕ ನಿರ್ದೇಶಕ ಚೇತನ್ ಕುಮಾರ್ ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಜೇಮ್ಸ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿ, ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ.

ಸೈನಿಕನ ಗೆಟಪ್​ನಲ್ಲಿ ಅಪ್ಪು:ದೇಶಕ್ಕೆ ನೀನೇ ಪವರ್ ಎನ್ನುವ ಸಂದೇಶ ಹೊಂದಿರುವ ಪೋಸ್ಟರ್​ನಲ್ಲಿ ಪವರ್ ಸ್ಟಾರ್ ಪುನೀತ್​​ ರಾಜ್​ಕುಮಾರ್​ ದೇಶ ಕಾಯುವ ಸೈನಿಕನ ಗೆಟಪ್​ನಲ್ಲಿ ಮಿಂಚಿದ್ದಾರೆ. ಇನ್ನು ಜೇಮ್ಸ್ ಸಿನಿಮಾ ಮೊದಲಿಗೆ ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಪುನೀತ್ ಅಕಾಲಿಕ ನಿಧನದಿಂದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಷಯ ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್​ನಲ್ಲಿ ಕಂಡು ಬಂದಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:'ಜೇಮ್ಸ್​​' ಸಿನಿಮಾ ರಿಲೀಸ್​ಗೆ 45 ದಿನಗಳು ಬಾಕಿ : ಸ್ವಾಗತಿಸಲು ರೆಡಿಯಾಗಿವೆ 5 ಹೆಲಿಕಾಪ್ಟರ್​​​ಗಳು

ಶಿವಣ್ಣ ರಾಘಣ್ಣ ಅಭಿನಯ: ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಿದ್ದಾರೆ. ಇದರ ಡಬ್ಬಿಂಗ್ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ABOUT THE AUTHOR

...view details