ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ರಾಜ್ ಗುರು ಆಗಿ ಅಭಿನಯಿಸುತ್ತಿರುವ ರಘು ಗೌಡ ಇದೀಗ ಇತ್ತೀಚೆಗಷ್ಟೇ ಹೊಸ ಸುದ್ದಿ ನೀಡಿದ್ದಾರೆ. ಇಷ್ಟು ದಿನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ರಘು ಗೌಡ ಇದೀಗ ವೆಬ್ ಸೀರಿಸ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಮಾಧ್ಯಮ ಅನೇಕ ಎಂಬ ಸಂಸ್ಥೆಯಡಿಯಲ್ಲಿ ರಾಜ್ ಗೋಪಿ ನಿರ್ದೇಶನ ಮಾಡುತ್ತಿರುವ ಸೂಪರ್ ಕಪಲ್ ಎಂಬ ವೆಬ್ ಸಿರೀಸ್ ರಘು ಗೌಡ ಅಭಿನಯಿಸುತ್ತಿದ್ದಾರೆ. ಅಂದ ಹಾಗೆ ಸೂಪರ್ ಕಪಲ್ ಮೊದಲ ಸೀಸನ್ ನಲ್ಲಿ ಹತ್ತು ಎಪಿಸೋಡ್ ಗಳಿದ್ದು ಈಗಾಗಲೇ ಇದು ಪ್ರಸಾರವಾಗುತ್ತಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಯುವ ಟೆಕ್ಕಿ ಜೋಡಿಯ ರಿಯಲ್ ಲೈಫ್ ನಲ್ಲಿ ನಡೆಯುವ ಕಥೆಗಳನ್ನು ಒಂದೊಂದಾಗಿ ಸೂಪರ್ ಕಪಲ್ ವೆಬ್ ಸೀರೀಸ್ ನಲ್ಲಿ ತೋರಿಸಿಕೊಟ್ಟಿದ್ದಾರೆ. ಯುವ ಟೆಕ್ಕಿ ಈಶ್ವರ್ ಆಗಿ ರಘು ಗೌಡ ಹಾಗೂ ಶಾರ್ವರಿಯಾಗಿ ತೇಜಸ್ವಿನಿ ಶರ್ಮ ಬಣ್ಣ ಹಚ್ಚಿದ್ದಾರೆ.