ಸಿನಿಮಾ ಎಂಬ ಮಾಯಾ ಬಜಾರ್ನಲ್ಲಿ ಮಿಂಚಬೇಕು ಎಂದು ಕನಸು ಹೊತ್ತು ಗಾಂಧಿನಗರಕ್ಕೆ ಬರುವವರು ಸಾಕಷ್ಟು ಮಂದಿ. ಅಂತವರಲ್ಲಿ ರಘು ಪಡುಕೋಟಿ ಎಂಬ ಯುವಕನ ಕನಸನ್ನು ಅವರ ತಂದೆ ಬಸವರಾಜ್ ಪಡುಕೋಟಿ ಅವರೇ ನನಸಾಗಿದ್ದಾರೆ.
ಇವನು 'ಯಾರ್‌ಮಗ'.. ರಘುಪಡುಕೋಟಿ ಆಲ್ಪಂ ಹಾಡು, ಹೊಸ ಚಿತ್ರದ ಟೈಟಲ್ ರಿಲೀಸ್! - undefined
ಬಸವರಾಜ್ ಪಡುಕೋಟಿ ಎಂಬುವರು ಬಂಡವಾಳ ಹೂಡುವ ಮೂಲಕ ತಮ್ಮ ಪುತ್ರ ರಘುಕೋಟಿ ಅವರ ಕನಸಿಗೆ ನೀರೆರೆದಿದ್ದಾರೆ. ನಿನ್ನೆ ರಘು ಅವರ ಆಲ್ಬಂ ಸಾಂಗ್ ಹಾಗೂ ಚಿತ್ರದ ಟೈಟಲ್‌ನ ಬಿಡುಗಡೆ ಮಾಡಲಾಯಿತು.
ರಘು ಕೋಟಿ ಮಾಡಿರುವ 'ಏ ಸೋನಾ' ಎಂಬ ಆಲ್ಬಂ ಹಾಡನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ಆಲ್ಬಂ ಜೊತೆಗೆ ರಘು ಕೋಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯಾರ್‌ಮಗ' ಎಂಬ ಚಿತ್ರದ ಟೈಟಲ್‌ನ ಕೂಡಾ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಲಹರಿ ವೇಲು, ಕೆಜಿಎಫ್ ಖ್ಯಾತಿಯ ಗರುಡ, ನಟ ಗಣೇಶ್ರಾವ್ ಕೇಸರ್ಕರ್ ಹಾಗೂ ಇನ್ನಿತರರು ಆಗಮಿಸಿ ರಘು ಪಡುಕೋಟಿ ಅವರ ಪ್ರಯತ್ನವನ್ನು ಪ್ರಶಂಶಿಸಿದರು. 'ಏ ಸೋನಾ' ಆಲ್ಬಂ ಸಾಂಗ್‌ನ ಸರಿಗಮಪ ಖ್ಯಾತಿಯ ಸುನೀಲ್ ಹಾಡಿದ್ದಾರೆ. ಹಾಡಿರುವುದು ಮಾತ್ರವಲ್ಲ ಈ ಹಾಡಿಗೆ ಅವರೇ ಸಾಹಿತ್ಯ ಬರೆದು ಸಂಗೀತ ನೀಡಿ ಆ್ಯಕ್ಟ್ ಕೂಡಾ ಮಾಡಿದ್ದಾರೆ. ಮಂಗಳೂರಿನ ಸುಂದರ ತಾಣಗಳಲ್ಲಿ ಈ ಆಲ್ಬಂ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ರಘು, ಸುನೀಲ್ ಹಾಗೂ ಕಿರುತೆರೆ ನಟಿ ಶಾಲಿನಿಗೌಡ ನಟಿಸಿದ್ದಾರೆ.
ಮಗನ ಕನಸನ್ನು ನನಸು ಮಾಡಲು ಹೊರಟಿರುವ ಬಸವರಾಜ್ ಪಡುಕೋಟಿ ಈ ಆಲ್ಬಂ ಸಾಂಗ್‌ನ ನಿರ್ಮಿಸಿದ್ದಾರೆ. ಜೊತೆಗೆ ಮಗನನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಲು ಹೊರಟಿದ್ದಾರೆ. ರಘು ಪಡುಕೋಟಿ 'ಯಾರ್‌ಮಗ' ಸಿನಿಮಾದ ಕಥೆ ಬರೆದಿರುವುದಲ್ಲದೆ ನಾಯಕನಾಗಿ ಕೂಡಾ ಬಣ್ಣ ಹಚ್ಚಿದ್ದಾರೆ. ವಿದ್ಯಾಪ್ರಭು ಎಂಬ ಹೊಸ ನಟಿ ಈ ಚಿತ್ರದಲ್ಲಿ ರಘು ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್ ರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.