ಕರ್ನಾಟಕ

karnataka

ETV Bharat / sitara

'ಲವ್​​ ಮಾಕ್​ಟೇಲ್​​​​​​​ 2' ಚಿತ್ರದಿಂದ ಹೊರಬಂದ ರಘು ದೀಕ್ಷಿತ್...ಕಾರಣ ಏನು..? - Darling krishna starring Love Mocktail 2

ಇತ್ತೀಚೆಗೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ 'ಲವ್ ಮಾಕ್​​​ಟೇಲ್​ - 2'ಚಿತ್ರಕ್ಕೂ ಹೆಚ್ಚು ಸಂಭಾವನೆ ಕೇಳಿದ್ದರು ಎನ್ನಲಾಗಿದೆ. ಆದರೆ ಅವರು ಕೇಳಿದಷ್ಟು ಸಂಭಾವನೆ ದೊರೆಯದ ಕಾರಣ ಬೇಸರಗೊಂಡು ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

Raghu Dixit came out from Love Mocktail 2
ರಘು ದೀಕ್ಷಿತ್

By

Published : Nov 10, 2020, 8:56 AM IST

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ಅಭಿನಯಿಸುತ್ತಿರುವ 'ಲವ್ ಮಾಕ್​​ಟೇಲ್-2' ಚಿತ್ರದಿಂದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೊರಬಂದಿದ್ದಾರೆ. ಲವ್ ಮಾಕ್​​ಟೇಲ್ ಮೊದಲ ಭಾಗಕ್ಕಿಂತ ಸೀಕ್ವೆಲ್ ಬಹಳ ಚೆನ್ನಾಗಿದೆ ಎಂದು ರಘು ದೀಕ್ಷಿತ್ ಇತ್ತೀಚೆಗೆ ಹೇಳಿದ್ದರು. ಆದರೆ ಇದೀಗ ಆ ಚಿತ್ರಕ್ಕೆ ಅವರು ಸಂಗೀತ ನಿರ್ದೇಶನ ಮಾಡುತ್ತಿಲ್ಲ.

'ಲವ್​​ ಮಾಕ್​ಟೇಲ್​​​​​​​ 2' ಚಿತ್ರದಿಂದ ರಘು ದೀಕ್ಷಿತ್ ಹೊರಕ್ಕೆ

ರಘುದೀಕ್ಷಿತ್​ ಲವ್ ಮಾಕ್​ಟೇಲ್ ಮೊದಲ ಭಾಗಕ್ಕೆ ಸಂಗೀತ ನೀಡಿದ್ದರು. ಈ ಹಾಡುಗಳು ಕೂಡಾ ಹಿಟ್ ಆಗಿತ್ತು. ರಘು ದೀಕ್ಷಿತ್ ಚಿತ್ರದಿಂದ ಹೊರ ಹೋಗಿರುವ ವಿಚಾರವನ್ನು ಸ್ವತ: ಕೃಷ್ಣ ಕನ್ಫರ್ಮ್ ಮಾಡಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಸಂಗೀತ ನಿರ್ದೇಶನ ಮಾಡಲು ರಘು ದೀಕ್ಷಿತ್ ಹೆಚ್ಚು ಹಣ ಡಿಮ್ಯಾಂಡ್​ ಮಾಡಿದ್ದರು ಎನ್ನಲಾಗಿದೆ. ರಘು ದೀಕ್ಷಿತ್ ಇದಕ್ಕೂ ಮುನ್ನ ಅನೇಕ ಚಿತ್ರಗಳಿಗೆ ಸಂಗೀತ ನೀಡಿದ್ದರೂ ಅದ್ಯಾಕೋ ಯಶಸ್ಸು ಕಂಡಿರಲಿಲ್ಲ. ಲವ್​​ ಮಾಕ್​ಟೇಲ್ ಸಿನಿಮಾ ಯಶಸ್ಸು ಗಳಿಸಿದ ನಂತರ ಚಿತ್ರದ ಹಾಡುಗಳು ಸಿನಿಪ್ರಿಯರಿಗೆ ಬಹಳ ಇಷ್ಟ ಆಗಿತ್ತು. ಅಷ್ಟೇ ಅಲ್ಲ ರಘು ದೀಕ್ಷಿತ್ ಬೇಡಿಕೆ ಕೂಡಾ ಹೆಚ್ಚಿಸಿತ್ತು. ಇದರಿಂದ ಅವರ ಸಂಭಾವನೆ ಕೂಡಾ ಏರಿತ್ತು.

'ಲವ್​​ ಮಾಕ್​ಟೇಲ್​​​​​​​ 2' ಚಿತ್ರೀಕರಣ

'ಲವ್ ಮಾಕ್ಟೇಲ್ 2' ಚಿತ್ರಕ್ಕೂ ಅವರು ದುಬಾರಿ ಸಂಭಾವನೆ ಕೇಳಿದರಂತೆ. ಅಷ್ಟೊಂದು ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಕೃಷ್ಣ ಹೇಳಿದ್ದಿಕ್ಕೆ, ಬೇಸರಗೊಂಡು ರಘು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ರಘು ಒಳ್ಳೆಯ ಸಂಗೀತ ನಿರ್ದೇಶಕ ಹೌದು, ಆದರೆ ಅವರು ಕೇಳಿದಷ್ಟು ಹಣ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿರುವ ಕೃಷ್ಣ, ಇದೀಗ ಹೊಸ ಸಂಗೀತ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಬಹುಶಃ ನಕುಲ್ ಅಭಯಂಕರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಬಹುದು ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ರಘು ಜಾಗಕ್ಕೆ ಯಾರು ಬರಲಿದ್ದಾರೆ ಎಂಬುದು ತಿಳಿಯಲಿದೆ.

ABOUT THE AUTHOR

...view details