ಕರ್ನಾಟಕ

karnataka

ETV Bharat / sitara

ಕೋವಿಡ್​​ ಕಂಟಕದಿಂದ ಮಂಕಾದ ಜನ ಜೀವಕ್ಕೆ 'ಭರವಸೆ ಬದುಕು' ಎಂಬ ಸಂಗೀತ ಔಷಧಿ - Aniruddha Jatkar

ಖ್ಯಾತ ಗಾಯಕರಾದ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಹಾಡಿಗೆ ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಹರೀಶ್ ಆರ್.ಕೆ ಹಾಗೂ ಸಿದ್ಧಾರ್ಥ್ ಹಾಡಿನ ಸಂಯೋಜನೆ, ಮನು ಸೆಡ್‌ಗಾರ್ ವಿಡಿಯೋ ಸಂಕಲನ ಮಾಡಿದ್ದಾರೆ..

raghu-dixit-baravaseya-baduku-new-kannada-song
ಭರವಸೆ ಬದುಕು

By

Published : Jun 8, 2021, 5:33 PM IST

ಕರಾಳ ಕೋವಿಡ್​​ ಕಂಟಕದಿಂದ ಬೇಸತ್ತಿರುವ ಜನಸಾಮಾನ್ಯರ ಬಾಳಲ್ಲಿ ಭರವಸೆ ಮತ್ತು ಸಕಾರಾತ್ಮಕ ಮನದಾಳವನ್ನು ಹೊರಹೊಮ್ಮಿಸಲು ಹೊರಟಿರುವ ಆಲಾಪ್​​ ಕ್ರಿಯೇಷನ್​​, 'ಭರವಸೆಯ ಬದುಕು’ ಎಂಬ ವಿಶೇಷ ಹಾಡನ್ನ ಸಿದ್ಧಪಡಿಸಿದೆ.

'ಫಾರ್ ರಿಜಿಸ್ಟ್ರೇಷನ್' ಚಿತ್ರದ ನಿರ್ದೇಶಕ ನವೀನ್ ದ್ವಾರಕನಾಥ್ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಗೀತೆಗೆ ಸ್ಯಾಂಡಲ್​​ವುಡ್​ ಹಾಗೂ ರಂಗಭೂಮಿ ಕಲಾವಿದರು ಸಾಥ್​ ನೀಡಿದ್ದಾರೆ.

ಗಾಯಕ ರಘು ದೀಕ್ಷಿತ್

ಈಗಾಗಲೇ ಅದೆಷ್ಟೋ ಮನಸ್ಸುಗಳು ನಕಾರಾತ್ಮಕ ಆಲೋಚನೆಯಲ್ಲಿ ಭರವಸೆ ಕಳೆದುಕೊಂಡಿದ್ದು, ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಹದೆಗೆಟ್ಟಿರುವುದರಿಂದ, ಜನರಲ್ಲಿನ ಆತ್ಮವಿಶ್ವಾಸ ಕುಂದುತ್ತಿದೆ.

ಈ ನಿಟ್ಟಿನಲ್ಲಿ ಶ್ರೀಸಾಮಾನ್ಯರಲ್ಲಿ ಪಾಸಿಟಿವ್ ಆಲೋಚನೆ ಬೆಳೆಸಲು, ಆತ್ಮ ವಿಶ್ವಾಸ ತುಂಬಲು ಹಾಗೂ ಭರವಸೆ ಮೂಡಿಸಲೆಂದೇ ಈ ಗೀತೆಯನ್ನು ನಿರ್ದೇಶಿಸಲು ಮುಂದಾದೆ ಅಂತಾರೆ ನಿರ್ದೇಶಕರಾದ ನವೀನ್ ದ್ವಾರಕನಾಥ್.

ನಿರ್ದೇಶಕ ನವೀನ್ ದ್ವಾರಕನಾಥ್

ಜೂನ್‌ 9 ಅಂದ್ರೇ ನಾಳೆ ಬುಧವಾರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಹಾಡು ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ಅನಿರುದ್ಧ ಜಟ್ಕರ್, ಚಂದನ್ ಶರ್ಮಾ, ಪ್ರಥ್ವಿ ಅಂಬಾರ್, ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ ಡಿ ಸತೀಶ್‌ ಚಂದ್ರ, ಕೃಷಿ ತಾಪಂಡಾ, ಹರ್ಷಿಕಾ ಪೂಣಚ್ಛ, ರಂಜಿನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜೈರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್‌ಜೆ ಸೌಜನ್ಯ, ವರ್ಷಿಣಿ ಜಾನಕೀರಾಮ್,ಆರ್ ಅಭಿಲಾಷ್, ಯಶ್ ಶೆಟ್ಟಿ ಕಾಣಿಸಿದ್ದಾರೆ.

'ಭರವಸೆಯ ಬದುಕು'

ಖ್ಯಾತ ಗಾಯಕರಾದ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಹಾಡಿಗೆ ಧ್ವನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಹರೀಶ್ ಆರ್.ಕೆ ಹಾಗೂ ಸಿದ್ಧಾರ್ಥ್ ಹಾಡಿನ ಸಂಯೋಜನೆ, ಮನು ಸೆಡ್‌ಗಾರ್ ವಿಡಿಯೋ ಸಂಕಲನ ಮಾಡಿದ್ದಾರೆ.

ABOUT THE AUTHOR

...view details