ಸದ್ಯ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತೀರ್ಪುಗಾರರಾಗಿ ಕಮಾಲ್ ಮಾಡುತ್ತಿದ್ದಾರೆ.
ಸಂಗೀತ ನಿರ್ದೇಶಕ, ಗೀತ ರಚನೆಗಾರ, ಗಾಯಕರಾಗಿ ಗುರುತಿಸಿಕೊಂಡಿರುವ ರಘು ದೀಕ್ಷಿತ್, ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕ ರಿಯಾಲಿಟಿ ಶೋವಿನ ತೀರ್ಪುಗಾರರಾಗಿ ಕಿರುತೆರೆಗೆ ಬಂದಿರುವ ರಘು ದೀಕ್ಷಿತ್ಗೆ ಕಿರುತೆರೆ ಹೊಸದಾದ ಅನುಭವ.
'ಜನರ ಮನೆ ಮಾತ್ರವಲ್ಲ ಮನವನ್ನು ಕೂಡಾ ಬಹುಬೇಗನೇ ಮುಟ್ಟಲು ಕಿರುತೆರೆಯಿಂದ ಮಾತ್ರ ಸಾಧ್ಯ. ಅಂತಹ ಮಾಧ್ಯಮದಲ್ಲಿ ನನಗೊಂದು ಅವಕಾಶ ಸಿಕ್ಕಿರುವುದಕ್ಕೆ ಬಹಳ ಖುಷಿಯಾಗುತ್ತಿದೆ' ಎಂದು ಹೇಳುವ ರಘುದೀಕ್ಷಿತ್ ಕಿರುತೆರೆಯಿಂದ ಇಂದು ಅದೆಷ್ಟೋ ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಿತರಾಗಿದ್ದಾರೆ. ಎಲೆ ಮರೆ ಕಾಯಿಯಂತಿರುವ ಅವರ ಪ್ರತಿಭೆ ನಾಡಿನಾದ್ಯಂತ ಪಸರಿಸಿದ್ದೇ ಕಿರುತೆರೆಯಿಂದ. ಸಿಕ್ಕ ಅವಕಾಶ, ವೇದಿಕೆಯನ್ನು ಸರಿಯಾಗಿ ಬಳಸಿದರೆ ಭವಿಷ್ಯ ರೂಪಿಸಲು ಕಷ್ಟವಾಗದು ಎನ್ನುತ್ತಾರೆ.
ಸಂಗೀತ ನಿರ್ದೇಶಕ, ಗಾಯಕನ ಹೊರತಾಗಿ ಆತ ಒಬ್ಬ ಅದ್ಭುತ ನಟನೂ ಹೌದು. ಪ್ರದೇಶ ಸಮಾಚಾರ, ಯಾನ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ರಘು ದೀಕ್ಷಿತ್ ಒಬಿರಾಯನ ಕಥೆಯಲ್ಲಿ ನಟಿಸಲಿದ್ದಾರೆ.
ರಘುದೀಕ್ಷಿತ್ ಮತ್ತು ಚಂದನಾ