ಕರ್ನಾಟಕ

karnataka

ETV Bharat / sitara

ಏ. 19ರಂದು ಬಿಡುಗಡೆಯಾಗುತ್ತಿದೆ ರಾಘಣ್ಣ ನಟನೆಯ 'ತ್ರಯಂಬಕಂ' - undefined

'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ರಾಘವೇಂದ್ರ ರಾಜ್​​​​​​​​​​​​​​​​​​​ಕುಮಾರ್ 'ತ್ರಯಂಬಕಂ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇದೇ ತಿಂಗಳ 19 ರಂದು ಸಿನಿಮಾ ತೆರೆಗೆ ಬರುತ್ತಿದೆ.

'ತ್ರಯಂಬಕಂ' ಚಿತ್ರತಂಡ

By

Published : Apr 9, 2019, 9:58 PM IST

ಸ್ಯಾಂಡಲ್​​​​ವುಡ್​​ನಲ್ಲಿ ಈಗ ವಿಭಿನ್ನ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಇವುಗಳ ನಡುವೆ ಚಿಕ್ಕದೊಂದು ಗಂಭೀರ ವಿಷಯವನ್ನಿಟ್ಟುಕೊಂಡು ಕಥೆ ಹೇಳಿರುವ ಸಿನಿಮಾವೊಂದು ಪ್ರೇಕ್ಷಕರನ್ನು ಸೆಳೆಯಲು ಬರುತ್ತಿದೆ.

'ತ್ರಯಂಬಕಂ' ಚಿತ್ರತಂಡ

ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ರಾಘವೇಂದ್ರ ರಾಜ್​​ಕುಮಾರ್​​ ನಟಿಸಿರುವ 'ತ್ರಯಂಬಕಂ' ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇದೇ ತಿಂಗಳ 19 ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಸಂಬಂಧ ಇಂದು ಚಿತ್ರತಂಡ ಮಾಧ್ಯಮಗೋಷ್ಠಿ ಏರ್ಪಡಿಸಿತ್ತು. ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳಿದ್ದು, ರಾಘವೇಂದ್ರ ರಾಜಕುಮಾರ್ ಜೊತೆಗೆ ಅನುಪಮ ಗೌಡ ಮತ್ತು ಆರ್.ಜೆ. ರೋಹಿತ್ ಕೂಡಾ ನಟಿಸಿದ್ದಾರೆ. ಬಹಳ ವರ್ಷಗಳ ನಂತರ ರಾಘವೇಂದ್ರ ರಾಜ್​ಕುಮಾರ್ ನಟನೆಗೆ ವಾಪಸಾಗಿರುವುದು ಗೊತ್ತೇ ಇದೆ.

ಈಗಾಗಲೇ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ರಾಘವೇಂದ್ರ ರಾಜ್​​​​​​​​​​​​​​​​​​​ಕುಮಾರ್ 'ತ್ರಯಂಬಕಂ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ತನಗೆ ಮರುಹುಟ್ಟು ನೀಡಿತು ಅಂತಾರೆ ರಾಘಣ್ಣ. ಥ್ರಿಲ್ಲಿಂಗ್ ಎಲಿಮೆಂಟ್ ಇರೋ ಈ ಚಿತ್ರದಲ್ಲಿ ಅನುಪಮ ಜರ್ನಲಿಸ್ಟ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆರ್​​​​.ಜೆ.ರೋಹಿತ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪ ಮಗಳ ಸೆಂಟಿಮೆಂಟ್ ಭಾವನಾತ್ಮಕವಾದದ್ದು. ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವುದು ಖಂಡಿತ ಎಂದು ಅನುಪಮ ಹೇಳಿದ್ರು.

ಸಿನಿಮಾದಲ್ಲಿ ನಿರ್ದೇಶಕ, ನಟ ಶಿವಮಣಿ ಕೂಡಾ ನಟಿಸಿದ್ದಾರೆ. ಗಣೇಶ್ ನಾರಾಯಣನ್ ಸಂಗೀತ ನಿರ್ದೇಶಿಸಿರುವ ಈ ಚಿತ್ರಕ್ಕೆ ಬಿ.ರಾಕೇಶ್ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ವೆಂಕಟ್ ದೇವ್​​​​​​​​​​​​​​​​​ ಸಹ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ರಚಿಸಿದ್ದಾರೆ. ನವೀನ್ ಕೃಷ್ಣ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U ಸರ್ಟಿಫಿಕೇಟ್ ಸಿಕ್ಕಿದ್ದು, ಇದೇ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

For All Latest Updates

TAGGED:

ABOUT THE AUTHOR

...view details