ಕನ್ನಡ ಚಿತ್ರರಂಗದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಹೈ ವೋಲ್ಟೇಜ್ ಚಿತ್ರ ಜೇಮ್ಸ್. ಪುನೀತ್ ನಟಿಸಿರುವ ಕೊನೆಯ ಸಿನಿಮಾವಾಗಿರೋ ಜೇಮ್ಸ್, ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ಸೇರಿ 4,000 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಬೆಳ್ಳಿತೆರೆ ಮೇಲೆ ಅಪ್ಪು ನೋಡಿ ಭಾವುಕರಾದ ರಾಘಣ್ಣ, ಶ್ರೀಮುರಳಿ, ಯುವ ರಾಜ್‍ಕುಮಾರ್ ಮುಂಜಾನೆ ಶೋ ನೋಡುವುದಕ್ಕೆ, ದೊಡ್ಮನೆಯವರಾದ ರಾಘವೇಂದ್ರ ರಾಜ್ ಕುಮಾರ್, ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್‍ಕುಮಾರ್, ಹಾಗು ಸಂಬಂಧಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸುವ ಮೂಲಕ ಭಾವುಕರಾದರು.
ಈ ಸಿನಿಮಾ ನೋಡಿದ ಬಳಿಕ ಅಪ್ಪು ಸಹೋದರ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿ, ಅಪ್ಪು ಅಭಿನಯ ಪಾತ್ರ ಸಮಾಜಕ್ಕೆ ಸಂದೇಶ ಸಾರುವ ಅಂಶಗಳ ಬಗ್ಗೆ ಕೊಂಡಾಡಿದರು.
ಪ್ರತಿಬಾರಿ ಪುನೀತ್ ರಾಜ್‍ಕುಮಾರ್ ಸಿನಿಮಾ ಬಿಡುಗಡೆ ಆದಾಗ, ಚಿಕ್ಕಪ್ಪನ ಸಿನಿಮಾ ನೋಡಿ, ರಿವ್ಯೂ ಹೇಳುತ್ತಿದ್ದ ಯುವ ರಾಜ್ ಕುಮಾರ್ ಕೂಡ, ಚಿಕ್ಕಪ್ಪನ ಕೊನೆ ಸಿನಿಮಾವನ್ನ ಬೆಳ್ಳಿ ತೆರೆ ಮೇಲೆ ನೋಡಿ ಭಾವುಕರಾಗುವ ಜೊತೆಗೆ ಚಿಕ್ಕಪ್ಪನ ಜಾಗವನ್ನ ಯಾರು ತುಂಬುವುದಿಕ್ಕೆ ಆಗೋಲ್ಲ ಎಂದರು. ಅಭಿಮಾನಿಗಳು ನಮ್ಮನೇ ದೇವರು ಅಂತಾ ನಮ್ಮ ತಾತ ಹೇಳಿರೋದು ಸತ್ಯ ಎಂದು ಹೇಳಿದರು.
ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಭಾವುಕರಾಗಿದ್ದರು. ಅಪ್ಪು ಮಾಮನ ಸರಳತೆ, ಅವರ ಸಹಾಯದ ಗುಣವನ್ನ ಮರೆಯೋದಿಕ್ಕೆ ಆಗೋಲ್ಲ. ಸಿನಿಮಾದಲ್ಲಿ ಅಪ್ಪು ಮಾಮನ ನೋಡೋದೆ ಚೆಂದ. ಅಪ್ಪು ಮಾಮ ಯಾವಾಗಲೂ ನಮ್ಮ ಜೊತೆ ಇದ್ದಾರೆ, ಇರುತ್ತಾರೆ ಎಂದು ಭಾವುಕರಾದರು.
ರಾಜ್ ವಂಶದ ಅಭಿಮಾನಿಗಳು ಮಾಗಡಿ ರಸ್ತೆಯಲ್ಲಿರೋ ವೀರೇಶ್ ಚಿತ್ರಮಂದಿರದಲ್ಲಿ ಮುಂಜಾನೆ 5.30ಕ್ಕೆ ಶೋ ನೋಡಿ ಕಣ್ತುಂಬಿಕೊಂಡರು. ಸಿನಿಮಾ ವೀಕ್ಷಿಸಿದ ಬಳಿಕ ಅಭಿಮಾನಿಗಳು, ಪವರ್ ಸ್ಟಾರ್ಗೆ ಯಾರು ಸರಿಸಾಟಿ ಇಲ್ಲ ಎಂದು ಬಣ್ಣಿಸಿದರು.