ಕರ್ನಾಟಕ

karnataka

By

Published : Aug 22, 2020, 7:16 PM IST

ETV Bharat / sitara

ರಾಘಣ್ಣನ 'ಆಡಿಸಿದಾತ' ಚಿತ್ರದ ಟೀಸರ್ ಲಾಂಚ್ ಮಾಡಿದ ಅಪ್ಪು

ಚಿತ್ರರಂಗದಿಂದ ದೂರ ಉಳಿದಿದ್ದ ರಾಘವೇಂದ್ರ ರಾಜ್​​ಕುಮಾರ್​​ ಅವರು ಸದ್ಯ 'ಆಡಿಸಿದಾತ' ಚಿತ್ರದ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ. ಇಂದು ಅಣ್ಣನ ಚಿತ್ರದ ಟೀಸರ್​​ ಬಿಡುಗಡೆ ಮಾಡಿದ ಪವರ್​​ ಸ್ಟಾರ್​​​ ಪುನೀತ್ ರಾಜ್​​ಕುಮಾರ್​​​ ಯಶಸ್ಸಿಗಾಗಿ ಶುಭಕೋರಿದರು.

raghavendra-rajkumar-new-film-adisidata-audio-launch
ರಾಘಣ್ಣನ 'ಆಡಿಸಿದಾತ'ನ ಚಿತ್ರದ ಟೀಸರ್ ಲಾಂಚ್ ಮಾಡಿದ ಅಪ್ಪು

ಗಣೇಶ​ ಹಬ್ಬದ ಶುಭ ಮುಹೂರ್ತದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯದ 25ನೇ ಸಿನಿಮಾ 'ಆಡಿಸಿದಾತ' ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್​​ನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ರಾಘಣ್ಣನ 'ಆಡಿಸಿದಾತ'ನ ಚಿತ್ರದ ಟೀಸರ್ ಲಾಂಚ್ ಮಾಡಿದ ಅಪ್ಪು

ಟೀಸರ್ ವೀಕ್ಷಿಸಿದ ಅಪ್ಪು, ಟೀಸರ್ ತುಂಬಾ ಚೆನ್ನಾಗಿದೆ ಎಂದು ಶುಭಕೋರಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಪ್ರಮುಖಪಾತ್ರ ನಿಭಾಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಫಣೀಶ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಮನಮೋಹಕ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ದೊರೆ ಭಗವಾನ್, ಗುರುದತ್, ಬಾಲರಾಜ್, ಸುಶ್ಮಿತ, ದಾಮೋದರ್ ಮುಂತಾದವರು ಅಭಿನಯಿಸಿದ್ದಾರೆ. ಆನಂದ್ ಇಳಯರಾಜ ಛಾಯಾಗ್ರಹಣ, ಹರೀಶ್ ಕೊಮ್ಮಿ ಸಂಕಲನ ಹಾಗೂ ಬಾಲ ಅವರ ನೃತ್ಯವಿದೆ. ಇನ್ನು ಈ ಚಿತ್ರ ಮೊದಲ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದು. ಕೊರೊನಾದಿಂದ ಶೂಟಿಂಗ್​ಗೆ ಬ್ರೇಕ್ ಹಾಕಲಾಗಿದೆ. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.

ABOUT THE AUTHOR

...view details