ಬೆಳಕು ಚಿತ್ರದ ಶೂಟಿಂಗ್ ವೇಳೆ ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ರಾಜಾಜಿನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿ ಕಳೆದ ಎರಡು ದಿನಗಳಿಂದ ರಾಘಣ್ಣ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆಯಿಂದ ರಾಘವೇಂದ್ರ ರಾಜಕುಮಾರ್ ಡಿಸ್ಚಾರ್ಜ್! - Raghavendra Rajkumar discharges from hospital
ರಾಘವೇಂದ್ರ ರಾಜಕುಮಾರ್ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾತನಾಡಿದ ರಾಘಣ್ಣ, ನಾನು ಶೂಟಿಂಗ್ನಲ್ಲಿದ್ದೆ, ಸಡನ್ ಆಗಿ ಹುಶಾರಿಲ್ಲದ ಹಾಗಾಯ್ತು. ತಕ್ಷಣ ಆಸ್ಪತ್ರೆಗೆ ದಾಖಲಾದೆ ಎಂದರು.
ಆಸ್ಪತ್ರೆಯಿಂದ ರಾಘವೇಂದ್ರ ರಾಜಕುಮಾರ್ ಡಿಸ್ಚಾರ್ಜ್!
ಸದ್ಯ ರಾಘವೇಂದ್ರ ರಾಜಕುಮಾರ್ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾತನಾಡಿದ ರಾಘಣ್ಣ, ನಾನು ಶೂಟಿಂಗ್ನಲ್ಲಿದ್ದೆ, ಸಡನ್ ಆಗಿ ಹುಶಾರಿಲ್ಲದ ಹಾಗಾಯ್ತು, ತಕ್ಷಣ ಆಸ್ಪತ್ರೆಗೆ ದಾಖಲಾದೆ ಎಂದರು.
ಒಂದು ವಾರ ವಿಶ್ರಾಂತಿ ಪಡೆದ್ರೆ ಸರಿ ಹೋಗುತ್ತೆ. ಒಂದು ವಾರದ ನಂತರ ಮತ್ತೆ ಶೂಟಿಂಗ್ಗೆ ಹೋಗುತ್ತೇನೆ. ನಾನು ಶೂಟಿಂಗ್ನಲ್ಲಿ ಇದ್ದಿದ್ದಕ್ಕೆ ನನ್ನನ್ನ ನಾನು ಕಾಪಾಡಿಕೊಂಡೆ. ಭಯ ಪಡೋ ಅಂತದ್ದು ಏನೂ ಆಗಿಲ್ಲ ಅಂತಾ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ರಾಘಣ್ಣ ಮನೆಗೆ ತೆರಳಿದರು.