ಕರ್ನಾಟಕ

karnataka

ETV Bharat / sitara

ಅಣ್ಣಾವ್ರ ಮನೆಯಲ್ಲಿ ಸೆಟ್ಟೇರಿತು ವಾರ್ಡ್​ ನಂ 11 ಸಿನಿಮಾ - ward no.11

ರಾಘವೇಂದ್ರ ರಾಜ್​ಕುಮಾರ್ ಅಮ್ಮನ ಮನೆ, ತ್ರಯಂಬಕ, ಪೊಗರು ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್ ಮಾಡಿರೋ ನಟ. ಸದ್ಯ ಡಾ ರಾಜ್ ಕುಮಾರ್ ಬೆಳವಣಿಗೆಗೆ ಕಾರಣವಾದ ಸದಾಶಿವನಗರದ ಮನೆಯಲ್ಲಿ, ಅವ್ರ ಮಗ ರಾಘವೇಂದ್ರ ರಾಜ್ ಕುಮಾರ್ ಅವರ ಹೊಸ ಸಿನಿಮಾ ಸೆಟ್ಟೇರಿದೆ.

ವಾರ್ಡ್ ನಂ 11

By

Published : Sep 3, 2019, 10:58 PM IST

ರಾಘವೇಂದ್ರ ರಾಜ್​ಕುಮಾರ್ ಅಮ್ಮನ ಮನೆ, ತ್ರಯಂಬಕ, ಪೊಗರು ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್ ಮಾಡಿರುವ ಹಿರಿಯ ನಟ. ಸದ್ಯ ಡಾ. ರಾಜ್ ಕುಮಾರ್ ಬೆಳವಣಿಗೆಗೆ ಕಾರಣವಾದ ಸದಾಶಿವನಗರದ ಮನೆಯಲ್ಲಿ, ರಾಘವೇಂದ್ರ ರಾಜ್ ಕುಮಾರ್ ಅವರ ಹೊಸ ಸಿನಿಮಾ ಸೆಟ್ಟೇರಿದೆ.

ಹೌದು, ಗೌರಿ ಗಣೇಶ್ ಹಬ್ಬದ ಪ್ರಯುಕ್ತ ಸೋಮವಾರ ರಾಘವೇಂದ್ರ ರಾಜ್ ಕುಮಾರ್ ಮನೆಯಲ್ಲಿ ಈ ಸಿನಿಮಾದ ಪೂಜೆ ನೆರವೇರಿಸಲಾಗಿದೆ. ವಾರ್ಡ್ ನಂ 11 ಅಂತಾ ಟೈಟಲ್ ಇಟ್ಟಿದ್ದು, ಮಗ ವಿನಯ್ ರಾಜ್​ಕುಮಾರ್ ಅಪ್ಪನ ಹೊಸ ಸಿನಿಮಾದ ಪೋಸ್ಟರನ್ನ ರಿಲೀಸ್ ಮಾಡಿದ್ದಾರೆ.

ಹೊಸ ಸಿನಿಮಾ ವಾರ್ಡ್​ ನಂ 11

ಒಂದು ಏರಿಯಾದಲ್ಲಿ ನಡೆಯುವ ಕಥೆ ಇದಾಗಿದ್ದು, ಈ ಚಿತ್ರಕ್ಕೆ ವಾರ್ಡ್ ನಂ 11 ಅಂತಾ ಟೈಟಲ್ ಇಡಲಾಗಿದೆ. ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.‌ ಈಗಾಗ್ಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ರಕ್ಷಿತ್ ಈ ಸಿನಿಮಾಕ್ಕೆ ಹೀರೋ ಆಗಿದ್ದಾರೆ.

ಇದರ ಜೊತೆಗೆ ನಟಿ ಸುಮನ್ ನಗರಕರ್, ಪ್ರಮೋದ್ ಶೆಟ್ಟಿ ಹೀಗೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಂಜಿನಿಯರಿಂಗ್ ಮುಗಿಸಿರೋ
ಶ್ರೀಕಾಂತ್ ಎಂಬುವರು ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ರಾಘವೇಂದ್ರ ರಾಜ್ ಕುಮಾರ್ ವಾರ್ಡ್ ನಂ 11 ಸಿನಿಮಾ, ಅಣ್ಣಾವ್ರು ಇದ್ದ ಮನೆಯಲ್ಲಿ ಸೆಟ್ಟೇರಿರೋದು ವಿಶೇಷ.

ABOUT THE AUTHOR

...view details