ಬೆಂಗಳೂರು:ಯುವರತ್ನ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಅವರ ಕುಟುಂಬ ಮಾತ್ರವಲ್ಲದೇ, ಅಭಿಮಾನಿಗಳ ಹೃದಯವನ್ನೂ ಘಾಸಿಗೊಳಿಸಿದೆ. ಪುನೀತ್ ನಮ್ಮನ್ನಗಲಿ ಏಳು ದಿನ ಕಳೆದರೂ ಅವರ ನೆನಪು ಮಾತ್ರ ಎಲ್ಲರನ್ನೂ ಇನ್ನೂ ಕಾಡುತ್ತಿದೆ.
ಪ್ರೀತಿಯ ಅಪ್ಪು ರಾಜ್ ಕುಟುಂಬದಲ್ಲಿ ಎಲ್ಲರ ಮುದ್ದಿನ ಮಗನಾಗಿದ್ದ. ಸಹೋದರರಾದ ರಾಘವೇಂದ್ರ ರಾಜ್ಕುಮಾರ್, ಶಿವರಾಜ್ಕುಮಾರ್ ಅವರು ಅಪ್ಪುನನ್ನು ಅವರ ಮಗನಂತೆ ಕಾಣುತ್ತಿದ್ದರು. ರಾಘವೇಂದ್ರ ರಾಜ್ಕುಮಾರ್ ಅವರಿಗೆ ಅಪ್ಪು ಕಣ್ಮರೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕಾರಣ ಈ ಹಿಂದೆ ಅವರು ಅಪ್ಪು ಜೊತೆಯಲ್ಲಿ ಹಾಡಿದ್ದ ಹಾಡಿನ ತುಣುಕೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.